ಸಮಗ್ರ ನ್ಯೂಸ್: ಕುಂದಾಪುರ ಕೋಡಿ ಹಬ್ಬದಲ್ಲಿ ನಾಲ್ಕು ಲಕ್ಷ ಜನರು ಭಾಗಿಯಾಗಲಿದ್ದು, ದೇಗುಲದ ಹೊರವಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಮಾಡಲು ವಿಹೆಚ್’ಪಿ ಮನವಿ ಮಾಡಿತ್ತು. ಕಳೆದ ಬಾರಿ ಉಡುಪಿಯಲ್ಲಿ ಆರಂಭವಾಗಿದ್ದ ಧರ್ಮದಂಗಲ್ ರಾಜ್ಯಾದ್ಯಂತ ಹಬ್ಬಿತ್ತು.
ಇದಕ್ಕೆ ಬೇಕಾದಂತ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ನೆರವನ್ನು ಇಟ್ಟುಕೊಂಡು ಒಂದು ಪತ್ರವನ್ನು ಕೂಡಾ ಆಡಳಿತ ಮಂಡಳಿಗೆ ಬರೆಯಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ಅವಕಾಶ ಇಲ್ಲ. ರಥ ಬೀದಿಯಲ್ಲಿ ಎಲ್ಲೂ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.