Ad Widget .

ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ?

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಬೆನ್ನಲ್ಲೇ ಸಂಸ್ಥೆಯ ಮೇಲೆ ಕೆಲವು ಅಪವಾದಗಳೂ ಇವೆ. ಇದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೋರ್ವರು ನೀಡಿದ ದೂರಿನ ಸಾರಾಂಶವನ್ನು ‘ಸಮಗ್ರ ಸಮಾಚಾರ’ ಪ್ರಕಟಿಸುತ್ತಿದೆ. ಇತ್ತೀಚೆಗೆ ಸಂಸ್ಥೆಯ ಬಸ್ ಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳೂ ಪೂರಕವಾಗಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಾನು ದಿನನಿತ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ ಓಡಾಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ ಗಳಲ್ಲಿ ಓಡಾಡುವ ವೇಳೆ ಗಮನಿಸಿದ ಹಾಗೂ ಅನುಭವಿಸಿದ ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

Ad Widget . Ad Widget . Ad Widget .

ಸಾಮಾನ್ಯವಾಗಿ ಬಸ್ ನಲ್ಲಿ ನಿರ್ವಾಹಕರು ಟಿಕೆಟ್ ಕೊಟ್ಟು ಪ್ರಯಾಣಿಕರನ್ನು ಅವರ ನಿಗದಿತ ಸ್ಥಳಗಳಲ್ಲಿ ಇಳಿಸಬೇಕು. ಅಥವಾ ಸಂಚಾರ ನಿಯಂತ್ರಕರು ಸೂಚಿಸಿದ ಸ್ಥಳಗಳಲ್ಲಿ ಪ್ರಯಾಣಿಕರನ್ನು ಕ್ಷೇಮವಾಗಿ ಇಳಿಸಬೇಕು. ಆದರೆ ಇತ್ತೀಚೆಗೆ ಕೆಲವು ಬಸ್ ಗಳಲ್ಲಿ ನಿರ್ವಾಹಕರು ಟಿಕೆಟ್ ಕೊಡುವುದಷ್ಟೇ ನಮ್ಮ ಕೆಲಸ, ಉಳಿದದ್ದು ಪ್ರಯಾಣಿಕರು ನೋಡಿಕೊಳ್ಳಲಿ ಎಂಬ ಮಟ್ಟಿಗೆ ಹೋಗಿದ್ದಾರೆ. ಇದರಿಂದಾಗಿಯೇ ಹಲವು ಬಸ್ ಗಳಲ್ಲಿ ಪ್ರಯಾಣಿಕರು ಆಯತಪ್ಪಿ ಬಿದ್ದು ಸಾಯುವುದು, ಅವಘಡ ಸಂಭವಿಸುವುದು ಸಾಮಾನ್ಯವಾಗಿದೆ.

ನಾನು ಇತ್ತೀಚೆಗೆ ಬಸ್ಸೊಂದರಲ್ಲಿ ಪ್ರಯಾಣಿಸುವ ವೇಳೆ ನನ್ನ ಇಳಿಯುವ ಸ್ಥಳ ಬಂದಾಗ ನಿರ್ವಾಹಕ ಸೀಟಿ ಹೊಡೆದು ಬಸ್ ನಿಲ್ಲಿಸಬೇಕಿತ್ತು. ಆದರೆ ಸೀಟಿ ಹೊಡೆಯಲು ನಿರ್ವಾಹಕನೇ ಇರಲಿಲ್ಲ. ಆತ ಚಾಲಕನ ಬಳಿ ಭಾರೀ ಚರ್ಚೆಯಲ್ಲಿ ತೊಡಗಿರುವುದು ಕಂಡು ಬಂತು. ಕೊನೆಗೆ ನಾನೇ ಕಿರುಚಾಡಿ ಬಸ್ ನಿಲ್ಲಿಸಲು ಸೂಚಿಸಿದೆ. ಚಾಲಕರೊಂದಿಗೆ ಮಾತನಾಡಬೇಡಿ ಎನ್ನುವ ಸೂಚನೆಯನ್ನು ನಿರ್ವಾಹಕನೇ ಮರೆತಹಾಗಿತ್ತು. ಚಾಲಕ ಟಿಕೆಟ್ ನೀಡಿ ಮುಂದೆ ಹೋಗಿ ಕುಳಿತುಕೊಳ್ಳುವುದು, ಪ್ರಯಾಣಿಕರ ಬಳಿಯೇ ಬಾಗಿಲು ಹಾಕಿಕೊಳ್ಳಲು ಹೇಳುವುದು ಸಾಮಾನ್ಯವಾಗಿತ್ತು, ಮತ್ತು ಈಗಲೂ ಅದೇ ಪರಿಸ್ಥಿತಿ ಇದೆ.

ಇನ್ನೊಂದು ಗಮನಿಸಿದ ಸಂಗತಿಯೆಂದರೆ ಕೆಲವು ವೃದ್ಧರು, ಮಹಿಳೆಯರು ಬಸ್ ಗೆ ಹತ್ತುವುದು, ಇಳಿಯುವುದಕ್ಕೇ ತ್ರಾಸ ಪಡುತ್ತಾರೆ. ಅವರ ಬಳಿ ನಿರ್ವಾಹಕರು ಬಾಗಿಲು ಹಾಕಿಕೊಳ್ಳಲು, ತೆಗೆಯಲು‌ ಹೇಳುವುದಾದರೆ ಇವರು ವೇತನ ಪಡೆಯುವುದೇಕೆ?

ಇನ್ನು ನಮ್ಮ ನಿರ್ವಾಹಕರಿಗೆ ಪ್ರಯಾಣಿಕರ ಪುಡಿಗಾಸಿನ ಮೇಲೆ ಅದೇನು ಮೋಹವೋ ನಾಕಾಣೆ!!. ಟಿಕೆಟ್ ಹರಿದು ಕೊಟ್ಟು ಒಂದೆರಡು ರೂಪಾಯಿ ಚಿಲ್ಲರೆಯನ್ನು ಬಾಕಿ ಇರಿಸಿ ಇಳಿಯುವ ವೇಳೆ ಕೊಡುತ್ತೇನೆ ಎಂದು ಬಾಕಿ ಚಿಲ್ಲರೆಯನ್ನು ಕಿಸೆಗಿಳಿಸಿಕೊಳ್ಳುವ ದೌರ್ಭಾಗ್ಯ ನಮ್ಮ ಸಾರಿಗೆ ಬಸ್ ನಿರ್ವಾಹಕರಿಗೆ ಮಾತ್ರವೇ ಇದೆಯೇನೋ? ಒಂದು ವೇಳೆ ಪ್ರಯಾಣಿಕ ಇಳಿಯುವ ವೇಳೆ ಆ ಚಿಲ್ಲರೆ ವಾಪಾಸ್ಸು ಕೇಳಿದರೆ ಮುಗೀತು ಬಿಡಿ. ಇವರ ಮುಖವನ್ನೊಮ್ಮೆ ನೋಡಬೇಕು. ಅಬ್ಬಾ…

ಮಾನ್ಯ ಸಂಚಾರ ನಿಯಂತ್ರಕರುಗಳು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇತ್ತೀಚೆಗೆ ನಡೆದ ಹಲವಾರು ಘಟನೆಗಳಿಗೆ ನಿರ್ವಾಹಕರ ಬೇಜಬ್ದಾರಿಯೇ ಕಾರಣವೆಂಬುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ನಿರ್ವಾಹಕರು ಬಾಗಿಲ ಬಳಿ ನಿಂತು ಪ್ರಯಾಣಿಕರನ್ನು ಇಳಿಸುವ, ಹತ್ತಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ, ಪುತ್ತೂರು, ಕಡಬಗಳಲ್ಲಿ ಪ್ರಯಾಣಿಕರು ಸಾವನ್ನಪ್ಪುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೊನ್ನೆ ನಾನು ಪ್ರಯಾಣಿಸಿದ ಬಸ್ಸೊಂದರಲ್ಲೂ ಇದೇ ಘಟನೆ ಪುನರಾವರ್ತನೆ ಆಗಿದ್ದು ವೃದ್ದರೊಬ್ಬರು ಅದೃಷ್ಟವಶಾತ್ ಸಾವಿನ ಬಾಯಿಯಿಂದ ಪಾರಾಗಿದ್ದರು. ಈ ವೇಳೆ ಕಂಡೆಕ್ಟರ್ ಮುಂದಿನ ಸೀಟಲ್ಲಿ ಕೂತು ಮೊಬೈಲ್ ಒತ್ತುತ್ತಿದ್ದ! ಆದ್ದರಿಂದ ಘಟಕಾಧಿಕಾರಿಗಳು, ಸಂಚಾರ ನಿಯಂತ್ರಕರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ನಿಮ್ಮ ಸಿಬ್ಬಂದಿಗೆ ಜವಾಬ್ದಾರಿಯಿಂದ ವರ್ತಿಸಲು ತಿಳಿಹೇಳಬೇಕು. ಇಲ್ಲವಾದಲ್ಲಿ ಇನ್ನಷ್ಟು ಅವಘಡಗಳಿಗೆ ಕಾರಣವಾಗಿ ಕಿಲ್ಲರ್ ಕೆಎಸ್ಆರ್ಟಿಸಿ ಎಂಬ ಹಣೆಪಟ್ಟಿ ಬೀಳಬಹುದು.

ಅನುಸೂಯ, ಪುತ್ತೂರು

Leave a Comment

Your email address will not be published. Required fields are marked *