Ad Widget .

ಮತ್ತೆ ಕಿರುತೆರೆಯತ್ತ ನಟ ಅನಿರುದ್ದ್| ಎಸ್.ನಾರಾಯಣ್ ನಿರ್ದೇಶನದಲ್ಲಿ ಬರಲಿದೆ “ಸೂರ್ಯವಂಶ”

ಸಮಗ್ರ ನ್ಯೂಸ್: ಎಸ್. ನಾರಾಯಣ್ ಎಂದರೆ ಸೂರ್ಯವಂಶ ಸಿನಿಮಾ ನೆನಪಾಗುತ್ತದೆ. ಕಲಾ ಸಾಮ್ರಾಟ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ಇಂದಿಗೂ ಸೂಪರ್ ಹಿಟ್.

Ad Widget . Ad Widget .

ಇದೇ ಟೈಟಲ್ ಇಟ್ಟುಕೊಂಡು ಈಗ ಎಸ್. ನಾರಾಯಣ್ ಮತ್ತೊಂದು ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಬಾರಿ ಅವರು ಸೂರ್ಯವಂಶ ಟೈಟಲ್ ನ ಧಾರವಾಹಿಯೊಂದನ್ನು ರಚಿಸಿ, ನಿರ್ದೇಶನ ಮಾಡಲಿದ್ದಾರೆ.

Ad Widget . Ad Widget .

ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್ ಅವರ ಜೊತೆಗೆ ಮಾಡಲಿದ್ದಾರೆ. ಈ ಧಾರವಾಹಿಯಲ್ಲಿ ಎಸ್.ನಾರಾಯಣ್ ಮತ್ತು ಅನಿರುದ್ಧ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಸೂರ್ಯವಂಶ ಹೆಸರಿನಲ್ಲಿ ಧಾರಾವಾಹಿ ಇನ್ನು ಕೆಲವು ದಿನಗಳಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯಲ್ಲಿ ಎಸ್.ನಾರಾಯಣ್ ಮತ್ತು ಅನಿರುದ್ಧ್ ಇಬ್ಬರೂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಈ ಮೊದಲು ಅನಿರುದ್ಧ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟಿಸುತ್ತಿದ್ದರು. ನಂತರ ಅದರ ನಿರ್ದೇಶಕರು ಮತ್ತು ನಿರ್ಮಾಪಕ ಆರೂರು ಜಗದೀಶ್ ರೊಂದಿಗಿನ ಮನಸ್ತಾಪದಿಂದಾಗಿ ಹೊರಬಂದರು. ಇದೀಗ ಹೊಸ ಪಯಣವನ್ನು ಅನಿರುದ್ಧ್ ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *