Ad Widget .

ಬಂಗಾಳಕೊಲ್ಲಿಯಲ್ಲಿ ಮ್ಯಾಂಡಸ್ ಚಂಡಮಾರುತ| ಕರ್ನಾಟಕದ ಈ ಜಿಲ್ಲೆಗಳು ಸೇರಿ ದ.ಭಾರತದ ಹಲವೆಡೆ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮಾಂಡೌಸ್’ ಚಂಡಮಾರುತ ಇನ್ನಷ್ಟು ತೀವ್ರಗೊಂಡಿದೆ. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನೈರತ್ಯ ಬಂಗಾಳಕೊಲ್ಲಿಯಲ್ಲಿ ಪ್ರದೇಶದಲ್ಲಿರುವ ಈ ‘ಮಾಂಡೌಸ್’ ಚಂಡಮಾರುತವು ಚೆನ್ನೈನಿಂದ ಆಗ್ನೇಯ ದಿಕ್ಕಿಗೆ 250ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತವಾಗಿದೆ. ‘ಮಾಂಡೌಸ್’ ತನ್ನ ಮೂಲ ಸ್ಥಳದಿಂದ ಪಶ್ವಿಮ ಮತ್ತು ವಾಯುವ್ಯ ದಿಕ್ಕಿನತ್ತ ಸಂಚರಿಸಲಿದೆ. ಶುಕ್ರವಾರ ರಾತ್ರಿ ವೇಳೆಗೆ ಪುದುಚೇರಿ ಮಾರ್ಗವಾಗಿ ತಮಿಳುನಾಡಿನ ಉತ್ತರ ಕರಾವಳಿ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಗೆ ಬಂದಪ್ಪಳಿಸಲಿದೆ.

Ad Widget . Ad Widget . Ad Widget .

ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿ.10ರಿಂದ 12ರವರೆಗೆ ಗುಡುಗು ಸಹಿತ ವ್ಯಾಪಕವಾಗಿ ಮಳೆ ಅಬ್ಬರಿಸಲಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರಕ್ಕೆ ಡಿಸೆಂಬರ್ 10ರಂದು ಹಾಗೂ ನಂತರ ಡಿಸೆಂಬರ್ 12ರವರೆಗೆ ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವೆಡೆ ಭಾರಿ ಮಳೆ ಆಗಲಿದೆ. ಹೀಗಾಗಿ ಇಷ್ಟೂ ಜಿಲ್ಲೆಗಳಿಗೆ ಮೂರು ದಿನ ‘ಹಳದಿ’ ಎಚ್ಚರಿಕೆ (Yellow Alert)ನೀಡಲಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಡಿಸೆಂಬರ್ 9ರಂದು ಹಗುರವಾಗಿ ಮಳೆ ಬರಲಿದೆ. ನಂತರದ ಮೂರು ದಿನ ಸಾಧಾರಣವಾಗಿ ಮಳೆ ಬೀಳಲಿದೆ. ಇನ್ನೂ ಉತ್ತರ ಒಳನಾಡಿನಲ್ಲಿ ಗುರುವಾರ ಸಹ ಒಣಹವೆ ದಾಖಲಾಗಿದೆ. ಶುಕ್ರವಾರ ಒಂದೆರಡು ಜಿಲ್ಲೆಗಳಲ್ಲಿ ಮಳೆ ಬಂದರೆ, ಡಿಸೆಂಬರ್ 10ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಹಗುರ ಮಳೆಯಾಗಲಿದೆ. ಬಳಿಕ ಡಿಸೆಂಬರ್ 11 ಮತ್ತು 12ರಂದು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯ ಸಿಂಚನವಾಗಲಿದೆ. ಇದರಿಂದ ಒಣಹವೆಯ ಪ್ರದೇಶ ತುಸು ತಂಪಾಗಲಿದೆ.

Leave a Comment

Your email address will not be published. Required fields are marked *