ಸಮಗ್ರ ನ್ಯೂಸ್: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‍ಗೆ ಸಿಹಿ-ಕಹಿ ಅನುಭವ ನೀಡಿದ್ದು, ಅದರಲ್ಲೂ ಗುಜರಾತ್‍ನ ಹಿನ್ನಡೆ ರಾಜಕೀಯ ಅತಂತ್ರ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ವಿರೋಧ ಪಕ್ಷದ ಅಧಿಕೃತ ಸ್ಥಾನಮಾನ ಪಡೆಯಲು ಕನಿಷ್ಟ ಒಟ್ಟಾರೆ ಕ್ಷೇತ್ರಗಳ ಶೇ.10ರಷ್ಟಾದರೂ ಗೆಲ್ಲಬೇಕಿದೆ. ಹಾಗೆ ನೋಡಿದರೆ 18 ಕ್ಷೇತ್ರಕ್ಕಿಂತ ಕಡಿಮೆ ಸ್ಥಾನಗಳಿಸಿದ್ದರೆ ಕಾಂಗ್ರೆಸ್‍ಗೆ ವಿಪಕ್ಷ ಸ್ಥಾನವು ಕೈತಪ್ಪಿ ಹೋಗಲಿದೆ.
ಆರು ಅವಧಿಗಳಿಂದ ಗುಜರಾತ್‍ನಲ್ಲಿ ಪ್ರಬಲ ಹಿಡಿತ ಹೊಂದಿರುವ ಬಿಜೆಪಿ ಕಾಂಗ್ರೆಸ್‍ನ ತಳಪಾಯದ ಕಲ್ಲುಗಳನ್ನು ಕಿತ್ತು ಬಿಸಾಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ದಿಟ್ಟ ನಾಯಕತ್ವದ ವೈಫಲ್ಯ, ಸ್ಥಳೀಯ ನಾಯಕತ್ವದ ಕೊರತೆ, ಗುಜರಾತ್‍ನ ಕಾಂಗ್ರೆಸ್‍ಗೆ ಮುಳುವಾಗಿದೆ. ಗಟ್ಟಿ ಸಿದ್ದಾಂತದ ಬೆನ್ನೆಲುಬಿಲ್ಲದೆ ಅಧಿಕಾರ ಗಳಿಕೆಯ ರಾಜಕಾರಣಕ್ಕಷ್ಟೇ ಸೀಮಿತವಾಗಿರುವ ಕಾಂಗ್ರೆಸ್‍ಗೆ ಹಂತ ಹಂತವಾಗಿ ನೆಲವಿಲ್ಲವಾಗುತ್ತಿದೆ.
ಈ ಮೊದಲು ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಗೆಲುವು ಸಾಧಿಸಲಾಗಲಿಲ್ಲ. ಈಗ ಗುಜರಾತ್‍ನಲ್ಲೂ ಅದೇ ಅನುಭವವಾಗಿದೆ. ಹಿಮಾಚಲಪ್ರದೇಶದಲ್ಲಿ ಆಶಾದಾಯಕ ಫಲಿತಾಂಶ ಬಂದಿದೆಯಾದರೂ ಅದನ್ನು ಸಂಭ್ರಮಿಸುವ ಪರಿಸ್ಥಿತಿ ಕಾಂಗ್ರೆಸ್‍ಗೆ ಇಲ್ಲ.
ಬಿಜೆಪಿಯ ಹುಮ್ಮಸ್ಸು ಒಂದೆಡೆಯಾದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಕುಗುತ್ತಿದೆ. ಸ್ಥಳೀಯ ನಾಯಕರು ಪಾಠ ಕಲಿಯದೆ ಪಕ್ಷದ ಅಪತ್ಯಕ್ಕಾಗಿ ಆಂತರಿಕ ಸಂಘರ್ಷ ಮಾಡಿಕೊಳ್ಳುತ್ತಾ ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ.