Ad Widget .

ಕೊಯಮತ್ತೂರು ಸ್ಪೋಟ ಪ್ರಕರಣ| ಮೂವರನ್ನು ವಶಕ್ಕೆ ಪಡೆದ ಎನ್ಐಎ| ಮಂಗಳೂರು ಸ್ಪೋಟಕ್ಕೂ ಇದೆ ಲಿಂಕ್!?

ಸಮಗ್ರ ನ್ಯೂಸ್: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬುಧವಾರ(ಡಿ.7)ದಂದು ಮೂವರನ್ನು ಬಂಧಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬಂಧಿತ ಮೂವರನ್ನು ಪೋದನೂರಿನ ಮೊಹಮ್ಮದ್ ತೌಫೀಕ್(25), ಕೊಣ್ಣೂರಿನ ಉಮರ್ ಫಾರೂಕ್ ಅಲಿಯಾಸ್ ಶ್ರೀನಿವಾಸನ್(39) ದಕ್ಷಿಣ ಉಕ್ಕಡಂನ ಫಿರೋಸ್ ಖಾನ್(28) ಎಂದು ಗುರುತಿಸಲಾಗಿದೆ.

Ad Widget . Ad Widget . Ad Widget .

ಸ್ಫೋಟದ ನಂತರ, ಪೊಲೀಸರು ಉಕ್ಕಡಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಪ್ರಕರಣವನ್ನು ಅಕ್ಟೋಬರ್ 27 ರಂದು ಎನ್‌ಐಎ ಮರು ದಾಖಲಿಸಿದೆ.

ಅಕ್ಟೋಬರ್ 23 ರಂದು ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಸ್ಫೋಟಕ ತುಂಬಿದ್ದ ಕಾರು ಸ್ಫೋಟಗೊಂಡಿತ್ತು. ಮೃತ ಆರೋಪಿ ಜಮೇಶಾ ಮುಬೀನ್ ಐಸಿಸ್‌ಗೆ ಮಾರುಹೋಗಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು ನಿರ್ದಿಷ್ಟ ಧಾರ್ಮಿಕ ಸ್ಮಾರಕಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಲು ಜನರಲ್ಲಿ ಭಯಭೀತಿ ಮೂಡಿಸಲು ಬಯಸಿದ್ದರು ಎಂದು ಹೇಳಲಾಗಿದೆ.

ಕೊಯಮತ್ತೂರು ಸ್ಫೋಟದ ನಂತರ, ನವೆಂಬರ್‌ನಲ್ಲಿ ಮಂಗಳೂರಿನ ಹೊರವಲಯದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಕೊಯಮತ್ತೂರು ದೇವಸ್ಥಾನದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಮಂಗಳೂರು ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

Leave a Comment

Your email address will not be published. Required fields are marked *