ಸುಳ್ಯ: ‘ಕಾಂತಾರ’ ಸಿನಿಮಾ ನೋಡಲು ಬಂದ ಯುವ ಜೋಡಿ ಮೇಲೆ ಹಲ್ಲೆ ಪ್ರಕರಣ| ಐವರ ವಿರುದ್ದ ಎಫ್ ಐಆರ್

ಸಮಗ್ರ ನ್ಯೂಸ್: ಸುಳ್ಯ ನಗರದ ಸಂತೋಷ್ ಥಿಯೇಟರ್ ಗೆ ಸಿನಿಮಾ ನೋಡಲು ಬಂದ ಯುವಜೋಡಿಯನ್ನು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.

Ad Widget ... ..

ಪ್ರಕರಣದಲ್ಲಿ ಹಲ್ಲೆಗೊಳಗಾದ ಬಂಟ್ವಾಳದ ಮೊಹಮ್ಮದ್ ಇಮ್ತಿಯಾಜ್ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತಳಾದ ತನ್ನದೇ ಕೋಮಿನ ಯುವತಿಯ ಭೇಟಿಗೆಂದು ಸುಳ್ಯಕ್ಕೆ ಯುವಕ ಬಂದಿದ್ದು, ಈ ವೇಳೆ ಇಬ್ಬರೂ ನಗರದ ಸಂತೋಷ್ ಚಿತ್ರಮಂದಿರಕ್ಕೆ ‘ಕಾಂತಾರ’ ಸಿನಿಮಾ ನೋಡಲು ನಿರ್ಧರಿಸಿ ಹೋಗಿದ್ದರು.

Ad Widget

ಆದರೆ ಸಿನಿಮಾ ಆರಂಭಕ್ಕೆ ಸಮಯವಿದ್ದ ಕಾರಣ ಅದರ ಆವರಣದಲ್ಲಿ ಮಾತನಾಡುತ್ತಿದ್ದ ವೇಳೆ ಮುಸ್ಲಿಂ ಯುವಕರ ಗುಂಪೊಂದು ಸ್ಥಳಕ್ಕೆ ಧಾವಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿರುವುದಾಗಿ ದೂರು ನೀಡಿದ್ದಾರೆ.

ಈ ಸಂಬಂಧವಾಗಿ ಸುಳ್ಯ ಠಾಣೆಯಲ್ಲಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬಿರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *