Ad Widget .

ಡಿ.8ಕ್ಕೆ ತಮಿಳುನಾಡಿಗೆ ಅಪ್ಪಳಿಸಲಿದೆ ಮ್ಯಾಂಡಸ್ ಚಂಡಮಾರುತ| ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಡಿಸೆಂಬರ್ 8 ರಂದು ತಮಿಳುನಾಡು, ಪುದುಚೆರಿಗೆ ಮ್ಯಾಂಡಸ್ ಚಂಡಮಾರುತ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Ad Widget . Ad Widget .

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳಲಿದ್ದು, ಚಂಡಮಾರುತದ ಅಬ್ಬರದಿಂದ ರಕ್ಷಿಸಲು ಎನ್‌ಡಿಆರ್‌ಎಫ್ ತಂಡಗಳು, ಸೇನೆ, ನೌಕಾಪಡೆ ಸಜ್ಜುಗೊಂಡಿದೆ.

Ad Widget . Ad Widget .

ಬುಧವಾರ(ಡಿ.7) ಸಂಜೆ ವೇಳೆಗೆ ವಾಯುಭಾರ ಕುಸಿತ ತೀವ್ರತೆ ಕಾಣಲಿದ್ದು, ನಾಳೆ ಬೆಳಗ್ಗೆ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ.

ಮ್ಯಾಂಡಸ್ ಹೆಸರಿನ ಈ ಚಂಡಮಾರುತ ಭಾರೀ ಮಳೆ ಜೊತೆ ಗುಡುಗು ಮಿಂಚನ್ನೂ ತರಲಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದ್ದು, ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಆದರೆ, ಈ ಚಂಡ ಮಾರುತವು ಪ್ರಬಲವಾಗುವ ಲಕ್ಷಣಗಳಿಲ್ಲ. ಒಂದೆರದು ದಿನದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ಭೂಸ್ಪರ್ಶವಾಗಿ ತನ್ನ ಸಾಮಥ್ರ್ಯ ಕಳೆದುಕೊಂಡು ದುರ್ಬಲವಾಗಲಿದೆ. ಬಳಿಕ ಕರ್ನಾಟಕದ ಮೂಲಕ ಹಾದು ಹೋಗಿ ಅರಬ್ಬೀ ಸಮುದ್ರ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಮೋಡಗಳ ಸಾಲು ಹಾದುಹೋಗುವ ಮಾರ್ಗದಲ್ಲಿ ಮಳೆಯಾಗಲಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *