Ad Widget .

ಸುಳ್ಯ: ಕಾಂತಾರ ಸಿನಿಮಾ ನೋಡಲು ಬಂದ ಮುಸ್ಲಿಂ ಜೋಡಿಗೆ ಥಳಿಸಿದ ಮುಸ್ಲಿಂ ಯುವಕರು!?

ಸಮಗ್ರ ನ್ಯೂಸ್: ‘ಕಾಂತಾರ’ ಸಿನಿಮಾ ವೀಕ್ಷಣೆಗೆಂದು ಬಂದ ಮುಸ್ಲಿಂ ಯುವಜೋಡಿಯ ಮೇಲೆ ಮುಸ್ಲಿಂ ಯುವಕರ ಗುಂಪೊಂದು ದಾಳಿ ನಡೆಸಿ ಥಳಿಸಿದ ಘಟನೆ ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ನಡೆದಿದೆ.

Ad Widget . Ad Widget .

ಡಿ.7ರಂದು ಈ ಘಟನೆ ನಡೆದಿದ್ದು, ಯುವಕ ಮತ್ತು ಯುವತಿ ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಸಿನಿಮಾ ನೋಡಲು ಬಂದವರು ಮಾತನಾಡುತ್ತಾ ನಿಂತಿದ್ದರು ಎನ್ನಲಾಗಿದೆ.

Ad Widget . Ad Widget .

ಈ ವೇಳೆ ಇದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಯುವಕರ ಗುಂಪೊಂದು ಯುವಕ ಮತ್ತು ಯುವತಿಯನ್ನು ಪ್ರಶ್ನಿಸಿದ್ದು, ಬಳಿಕ ಯುವಕನಿಗೆ ಥಳಿಸಿದರೆನ್ನಲಾಗಿದೆ. ಬಳಿಕ ‘ಕಾಂತಾರ’ ಸಿನಿಮಾ ನೋಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮುಸ್ಲಿಮರು ಕಾಂತಾರ ಸಿನಿಮಾ ನೋಡಬಾರದೇ? ಎಂಬ ಪ್ರಶ್ನೆ ಮೂಡಿದೆ.

ಈ ವೇಳೆ ಚಿತ್ರಮಂದಿರದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲ್ಲೆಗೊಳಗಾದ ಯುವಕ ಮತ್ತು ಹಲ್ಲೆಗೈದವರ ತಂಡವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *