ದೆಹಲಿ ಮ.ನ.ಪಾ ಚುನಾವಣೆ| ಹದಿನೈದು ವರ್ಷಗಳ ಬಿಜೆಪಿ ಯುಗವನ್ನು ಗುಡಿಸಿದ ಆಪ್

ಸಮಗ್ರ ನ್ಯೂಸ್: 250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದೆ.

Ad Widget ... ..

ಭಾರತೀಯ ಜನತಾ ಪಕ್ಷ 105 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್‌ಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿದೆ.

Ad Widget

250 ವಾರ್ಡ್‌ಗಳ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು 126 ಸದಸ್ಯರ ಬಹುಮತ ಬೇಕಾಗಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್ ಗಳಲ್ಲಿ ಜಯ ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಂತಾಗಿದೆ.

ಈ ಮೂಲಕ ಹದಿನೈದು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿಜೆಪಿಯ ಯುಗ ಮ.ನ.ಪಾ ಚುನಾವಣೆಯಲ್ಲಿ ಅಂತ್ಯವಾಗಿದೆ.

Leave a Comment

Your email address will not be published. Required fields are marked *