Ad Widget .

ಸರಣಿ‌ ಅಪಘಾತಕ್ಕೆ ಕಾರಣವಾಯ್ತು ಉರಗ| ಹಾವಿನಂತ ರಸ್ತೆಯಲ್ಲಿ ಹಾವೇ ಬಂದು ಮಲಗಿತ್ತು!!

ಸಮಗ್ರ ನ್ಯೂಸ್: ಆ ಒಂದು ಹಾವು ಹೆದ್ದಾರಿಯಲ್ಲಿ ಅಡ್ಡ ಬಂದ ಕಾರಣ ಚಿಕ್ಕಬಳ್ಳಾಪುರ ಬಳಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಸರಣಿ ಅಪಘಾತಗಳು ಸಂಭವಿಸಿಬಿಟ್ಟಿವೆ. ಹೆದ್ದಾರಿಯಲ್ಲಿ ಹಾವು ಅಡ್ಡ ಬಂತು ಅಂತಾ ಹಿಂದೆಮುಂದೆ ನೋಡದೇ ಕಂಟೇನರ್ ಲಾರಿ ಚಾಲಕ ಬ್ರೇಕ್ ಹಾಕಿದ್ದಾನೆ. ಅಷ್ಟರಲ್ಲಿ ಮುಂದೆ ಲಾರಿ ಚಾಲಕನ ಅವಾಂತರದಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ.

Ad Widget . Ad Widget .

ಎರಡು ಕಂಟೈನರ್ ಲಾರಿ, ಒಂದು ಟಾಟಾ ಏಸ್, ಒಂದು ಕಾರು, ಒಂದು ಟಿಪ್ಪರ್ ಮಧ್ಯೆ ಸರಣಿ ಅಪಘಾತಗಳು ತನ್ನಿಂತಾನೇ ಆಗಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರಗೊಂಡಿದೆ. ಟಿಪ್ಪರ್ ಚಾಲಕ ವಾಹನದೊಳಗೆ ಸಿಲುಕಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿದ್ದ ಸಂಚಾರಿ ಠಾಣೆ ಪೊಲೀಸರು ಘಟನೆಯಿಂದ ಬೇಸ್ತುಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Ad Widget . Ad Widget .

ಕೇವಲ ಒಂದು ‌ಹಾವಿನಿಂದಾಗಿ ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಹಾವಿನಾಟದಿಂದ ವಾಹನ ಚಾಲಕರು, ಪೊಲೀಸರು ಸುಸ್ತಾದರು.

Leave a Comment

Your email address will not be published. Required fields are marked *