Ad Widget .

ಹೆಣ್ಣುಮಗುವಿಗೆ ಜನ್ಮ ನೀಡಿದ ಸಂಭ್ರಮದಲ್ಲಿರುವಾಗಲೇ ಬಂಪರ್ ಲಾಟರಿ ಹೊಡೆದ ಬಾಣಂತಿ| ಲಕ್ಷ್ಮಿ ಕಾಲು ಮುರ್ಕೊಂಡು ಬೀಳೋದು ಅಂದ್ರೆ ಇದೇನಾ?

ಸಮಗ್ರ ಡಿಜಿಟಲ್ ಡೆಸ್ಕ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರಿಗೆ $100,000 (ಸುಮಾರು 81 ಲಕ್ಷ ರೂ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಈ ಸುದ್ದಿ ವೈರಲ್​ ಆಗಿದೆ.

Ad Widget . Ad Widget .

ಉತ್ತರ ಕೆರೊಲಿನಾದ ಮಹಿಳೆ ಲಾಟರಿಯಲ್ಲಿ ಈ ಬಹುಮಾನ ಗೆದ್ದಿದ್ದು, ತನ್ನ ಮಗಳ ಕಾಲ್ಗುಣ ಎಂದು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾಳೆ. ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿರುವ ಕಾನ್ಕಾರ್ಡ್‌ನ 28 ವರ್ಷದ ಮಹಿಳೆಗೆ ಇಂಥದ್ದೊಂದು ಅದೃಷ್ಟ ಒಲಿದು ಬಂದಿದೆ.

Ad Widget . Ad Widget .

ಈಕೆ ತನ್ನ ಅದೃಷ್ಟ ಪರೀಕ್ಷೆ ಮಾಡಲು ಪವರ್​ಬಾಲ್​ ಟಿಕೆಟ್​ ಖರೀದಿಸಿದ್ದಳು. ಆ ವೇಳೆ ಈಕೆ ತುಂಬು ಗರ್ಭಿಣಿ. ಕಳೆದ ವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹೆತ್ತ ಖುಷಿ ಒಂದೆಡೆಯಾದರೆ, ಮಗು ಹೆತ್ತು ಎರಡು ಗಂಟೆಯ ಒಳಗೆ ಆಕೆಗೆ ಬಹುಮಾನದ ಸುದ್ದಿಯೂ ಬಂದಿದ್ದು, ಡಬಲ್​ ಧಮಾಕಾ ಎಂದು ಬರೆದುಕೊಂಡಿದ್ದಾಳೆ.

“ಮಗಳು ನನಗೆ ಅದೃಷ್ಟವನ್ನು ತಂದಳು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾಳೆ. ಏಕೆಂದರೆ ಈಕೆಗೆ ಇಬ್ಬರು ಗಂಡುಮಕ್ಕಳಿದ್ದರು. ಹೆಣ್ಣು ಮಗುವಿನ ಆಸೆಯಿಂದ ಮತ್ತೊಮ್ಮೆ ಗರ್ಭ ಧರಿಸಿದ್ದಳು. ಮಗಳು ಹುಟ್ಟಿದ ಖುಷಿಯಲ್ಲಿ ಇರುವಾಗಲೇ ಬಹುಮಾನವೂ ಬಂದಿದೆ.

Leave a Comment

Your email address will not be published. Required fields are marked *