Ad Widget .

ಮಂಗಳೂರು:ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಶೋರೂಂ ಸಿಬ್ಬಂದಿ ಮೇಲೆ ಹಲ್ಲೆ| ಯದ್ವಾತದ್ವ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

ಸಮಗ್ರ ನ್ಯೂಸ್: ಸಂಘಪರಿವಾರ ಕಾರ್ಯಕರ್ತರು ಚಿನ್ನದ ಶೋರೂಮಿಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ.

Ad Widget . Ad Widget .

ಮಂಗಳವಾರ ಸಂಘಪರಿವಾರ ಕಾರ್ಯಕರ್ತರ ತಂಡವೊಂದು ಕಂಕನಾಡಿ ಬಳಿ ಇರುವ ಚಿನ್ನದ ಶೋರೂಮ್ ಒಂದಕ್ಕೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದೆ. ಈ ತಂಡ ರಜೆಯಲ್ಲಿದ್ದ ಸಿಬ್ಬಂದಿಯನ್ನು ಎಳೆದು ತಂದು ಶೋರೂಮ್ ಒಳಗೆ ಯದ್ವಾತದ್ವ ಥಳಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲ್ಲೆಗೀಡಾದ ಸಿಬ್ಬಂದಿ ಮುಸ್ಲಿಮನಾಗಿದ್ದು, ತನ್ನ ಸಹೋದ್ಯೋಗಿಯಾಗಿರುವ ಅನ್ಯಮತೀಯ ಯುವತಿಯ ಜೊತೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

Ad Widget . Ad Widget .

ವಿಷಯ ತಿಳಿಯುತ್ತಿದ್ದಂತೆ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋರೂಮ್ ಸಿಬ್ಬಂದಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಶೋರೂಮ್ ಆಡಳಿತ ಮಂಡಳಿಯವರು ಯಾವುದೇ ದೂರು ನೀಡಿಲ್ಲ.

Leave a Comment

Your email address will not be published. Required fields are marked *