Ad Widget .

ವ್ಯಕ್ತಿಯ ಬೀಕರವಾಗಿ‌ ಕೊಲೆಗೈದ 6ಮಂದಿಯ ತಂಡ| ಕೃತ್ಯದಲ್ಲಿ ಮೂವರು ಮಹಿಳೆಯರೂ ಭಾಗಿ| ಸಿಸಿಟಿವಿಯಲ್ಲಿ ಕೊಲೆ ಚಿತ್ರಣ ಸೆರೆ

ಸಮಗ್ರ ನ್ಯೂಸ್: ಆರು ಮಂದಿಯ ತಂಡವೊಂದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಶೇಷವೆಂದರೆ ಈ ಕೃತ್ಯದಲ್ಲಿ ಮೂವರು‌ ಮಹಿಳೆಯರೂ ಪಾತ್ರ ವಹಿಸಿರುವುದು. ಈ ಕೊಲೆಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ.

Ad Widget . Ad Widget .

ಕಳೆದ ಶನಿವಾರ ಈ ಪ್ರಕರಣ ನಡೆದಿದ್ದು, ಬರೋಬ್ಬರಿ ಆರು ಮಂದಿ ಸೇರಿ ಅಪರಿಚಿತ ವ್ಯಕ್ತಿಯನ್ನು ಕೊಲೆಗೈದಿದ್ದರು. ಅದರಲ್ಲೂ ಈ ಹತ್ಯೆ ಪ್ರಕರಣದಲ್ಲಿ ಮೂವರು ಮಹಿಳೆಯರೂ ಭಾಗಿಯಾಗಿರುವುದು ಮತ್ತಷ್ಟು ಆಘಾತಕಾರಿ ಅಂಶವಾಗಿದೆ. ಇನ್ನು ಈ ಪ್ರಕರಣದ ಭಯಾನಕತೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ ಕೊಲೆಗಾರರು ಇಪ್ಪತ್ತು ಬಾರಿ ಕಲ್ಲು ಎತ್ತಿ ಹಾಕಿ ಕುಕೃತ್ಯ ಎಸಗಿದ್ದಾರೆ.

Ad Widget . Ad Widget .

ಬೆಂಗಳೂರಿನ ಕೆ ಪಿ ಅಗ್ರಹಾರ ಐದನೇ ಕ್ರಾಸ್​ನಲ್ಲಿ ಕಳೆದ ಶನಿವಾರ ನಡೆದ ಈ ಹತ್ಯೆಯ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನು ಕಂಡು ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಸದ್ಯ ಮೃತ ವ್ಯಕ್ತಿ ಯಾರೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ 26 ವರ್ಷದ ಬಾಳಪ್ಪ ಜಮಖಂಡಿ ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಮೊದಲಿಗೆ ಮಹಿಳೆಯೊಬ್ಬರು ಬಾಳಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಕೆಲವರು ಬಾಳಪ್ಪ ಜಮಖಂಡಿಯನ್ನು ಹಿಡಿದಿದ್ದರು. ಅಷ್ಟರಲ್ಲಿ ಉಳಿದವರು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಸದ್ಯ ಕೊಲೆ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮೊಬೈಲ್ ಸುಳಿವಿನ ಮೇರೆಗೆ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಶನಿವಾರ ರಾತ್ರಿ ಕೆ. ಪಿ ಅಗ್ರಹಾರಕ್ಕೆ ಬಂದಿದ್ದ ಬಾಳಪ್ಪ ಜಮಖಂಡಿ, ಆರೋಪಿಗಳ ಭೇಟಿಗೂ ಮುನ್ನ ಇನ್ನಿಬ್ಬರು ವ್ಯಕ್ತಿಗಳ ಭೇಟಿಯಾಗಿದ್ದ. ಸಿಗರೇಟ್ ಸೇದಿ, ಮೊಬೈಲ್ ಚಾರ್ಜ್​ಗೆ ಹಾಕಿ ಅವರೇನೊ ಅಲ್ಲಿಗೆ ಕರೀತಾ ಇದ್ದಾರೆ ಹೋಗಿ ಬರ್ತಿನಿ ಅಂದಿದ್ದ. ಐದನೇ ಕ್ರಾಸ್ ಮೆಡಿಕಲ್ ಸ್ಟೋರ್ ಬಳಿ ಇದ್ದಾಗ ಅಲ್ಲಿಗೆ ಆರು ಜನ ಬಂದಿದ್ದಾರೆ. ಈ ಮೂವರು ಮಹಿಳೆಯರು ಮೂವರು ಪುರುಷರು ಬಾಳಪ್ಪ ಜಮಖಂಡಿ ಜೊತೆ ಗಲಾಟೆ ಮಾಡಿ ಬಳಿಕ ಬಳಿಕ ಬಾಳಪ್ಪನ ಹಿಡಿದುಕೊಂಡು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ.

ಕೊಲೆ ಆರೋಪಿಗಳು ಕೂಡಾ ಬಾದಾಮಿ ಮೂಲದವರು ಎಂಬುದು ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಓರ್ವ ಕೆ ಪಿ ಅಗ್ರಹಾರದಲ್ಲಿ ಸೆಕ್ಯುರಿಟಿಯಾಗಿದ್ದು, ಆತನನ್ನು ವಶಕ್ಕೆ ಪಡೆದ ಪೊಲೀಸರು ಉಳಿದವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *