Ad Widget .

ಮಂಗಳೂರಿನಲ್ಲಿ ವ್ಯಕ್ತಿಯೋರ್ವನಿಗೆ ಸಿಕ್ತು ಕಂತೆಕಂತೆ ಹಣ| ಆದ್ರೆ ಒಂದು ಪೆಗ್ ಹಾಕಿದ್ದಷ್ಟೇ ಲಾಭ!!

ಸಮಗ್ರ ನ್ಯೂಸ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಗಾದೆ ಮಾತಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವ್ಯಕ್ತಿಯೋರ್ವರಿಗೆ ಸಿಕ್ಕಿದ ಹಣ ಉಪಯೋಗಕ್ಕೆ ಬಂದಿಲ್ಲ. ಮದ್ಯ ವ್ಯಸನಿಯಾಗಿರುವ ಶಿವರಾಜ ಎಂಬುವರಿಗೆ ಕಳೆದು ತಿಂಗಳು ನವೆಂಬರ್​ 27ರಂದು ನಗರದ ಪಂಪ್​ವೆಲ್ ಬಾರ್​ ಬಳಿ ಕಂತೆ ಕಂತೆ ಹಣ ಇರುವ ಬಾಕ್ಸ್ ಸಿಕ್ಕಿದ್ದು ಒಂದು ಪೆಗ್ ಮಾತ್ರ ಅದರಲ್ಲಿ ಅವರಿಗೆ ಲಾಭವಾಗಿದ್ದು!! ಬಾಕ್ಸ್​ನಲ್ಲಿ ​ 500, 2,000 ರೂ. ಮುಖಬೆಲೆಯ ಗರಿ ಗರಿ ನೋಟುಗಳ ಹಣವಿದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬರದಿದ್ದದ್ದು ಈಗ ಸುದ್ದಿಯಾಗಿದೆ.

Ad Widget . Ad Widget .

ಹಣ ಸಿಕ್ಕಿದ್ದೇ ತಡ ಮದ್ಯ ವ್ಯಸನಿಯಾಗಿದ್ದ ಶಿವರಾಜ್​​ ಹಣದ ಬಾಕ್ಸ್​ನಲ್ಲಿದ್ದ 1 ಸಾವಿರ ರೂ ನೀಡಿ ಮದ್ಯ ಸೇವಿಸಿದ್ದಾರೆ. ನಂತರ ತನ್ನ ಜೊತೆಗಿದ್ದವರಿಗೂ ನೋಟಿನ ಕಂತೆ ನೀಡಿದ್ದಾರೆ. ಈ ವಿಷಯ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಖಾಕಿ ಹಣದ ಬಾಕ್ಸ್​ ಸಮೇತ ಶಿವರಾಜ್​ನನ್ನ ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ನಂತರ ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ಬಿಟ್ಟು ಕಳಿಸಿದ್ದಾರೆ. ಶಿವರಾಜ್​​ ಬಾಕ್ಸ್​ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಕ್ಸ್​ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ .

ವಿಪರ್ಯಾಸವೆಂದರೆ ವಾರ ಕಳೆದರೂ ಹಣದ ವಾರಸುದಾರರು ಮಾತ್ರ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಚುನಾವಣೆ ಹೊಸ್ತಿನಲ್ಲಿ ಈ ರೀತಿ ಹಣದ ಕಂತೆ ಕಂತೆ ಬಾಕ್ಸ್​​ ಸಿಕ್ಕಿರುವುದು ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ .

Leave a Comment

Your email address will not be published. Required fields are marked *