80ರ ಒಂಟಿ ವೃದ್ಧೆ ಮೇಲೆ 30ರ ಯುವಕನಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಎಂಬತ್ತು ವರ್ಷದ ಒಂಟಿ ವೃದ್ಧೆ ಮೇಲೆ 30 ವರ್ಷದ ಕಾಮುಕನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ.

Ad Widget ... ..

ಗಂಡನನ್ನು ಕಳೆದುಕೊಂಡಿದ್ದ ವೃದ್ಧೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಆಕೆಯ ಮೇಲೆ ಎಸ್‌.ರವಿ ಎಂಬಾತ ಅತ್ಯಾಚಾರ ಎಸಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.

Ad Widget

ಶನಿವಾರ ಬೆಳಗ್ಗೆ ಒಂಟಿಯಾಗಿದ್ದ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ ಎಸ್‌.ರವಿ, ವೃದ್ಧೆಯನ್ನು ಅಡುಗೆ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬೇಡ ಎಂದು ಎಷ್ಟೇ ಕೂಗಿಕೊಂಡರೂ ಆತ ಬಿಡಲಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

20 ವರ್ಷಗಳ ಹಿಂದೆ ವೃದ್ಧೆಯ ಪತಿ ತ್ಯಹಲೋಕ ತ್ಯಜಿಸಿದ್ದ. ಆಕೆಗೆ ಮಕ್ಕಳು ಇರಲಿಲ್ಲ. ಹೊನ್ನಾಳಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *