Ad Widget .

ಎನ್.ಆರ್.ಪೊಲೀಸರ ಕಾರ್ಯಾಚರಣೆ|ಐವರು ಅಪಹರಣಕಾರರ ಬಂಧನ

ಸಮಗ್ರ ನ್ಯೂಸ್: ಮೈಸೂರಿನ ಎನ್ ಆರ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ
ಐವರು ಅಪಹರಣಕಾರರ ಬಂಧನವಾಗಿದೆ.

Ad Widget . Ad Widget .

ಹಣಕ್ಕೆ ಬೇಡಿಕೆ ಇಡುವ ಉದ್ದೇಶದಿಂದ ಉದ್ಯಮಿಯೊಬ್ಬರನ್ನು ಅಪಹರಿಸಲು ಯತ್ನಿಸಿ ವಿಫಲರಾಗಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಕಳೆದ ನವೆಂಬರ್ 24ರಂದು ಉದ್ಯಮಿ ಒಬ್ಬರನ್ನು ಅವರ ಲಾರಿ ಚಾಲಕನೇ ಇತರ ಸಹಚರರೊಂದಿಗೆ ಸೇರಿಕೊಂಡು ಅಪಹರಣಕ್ಕೆ ಯತ್ನಿಸಿದ್ದ.
ಬೆಂಗಳೂರು-ಮೈಸೂರು ಹೈವೇಯಲ್ಲಿರುವ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿಯಲ್ಲಿ ಉದ್ಯಮಿಯ ಅಪಹರಣಕ್ಕೆ ಯತ್ನಿಸಿದ್ದರು.
ಆದರೆ ಉದ್ಯಮಿಯ ಅಪಹರಣ ಯತ್ನ ವಿಫಲವಾಗಿತ್ತು.

Ad Widget . Ad Widget .

ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಹೆಜ್ಜೆ ಜಾಡು ಹಿಡಿದು ಸಾಗಿದ್ದ ಪೊಲೀಸರ ತಂಡಕ್ಕೆ ಐವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಬಂಧಿತರಿಂದ 1 ಹುಂಡೈ ಕಾರು, 1 ದ್ವಿಚಕ್ರ ವಾಹನ, 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

Leave a Comment

Your email address will not be published. Required fields are marked *