ಮಂಗಳೂರು: ಲಾರಿಗಳ ಮುಖಾಮುಖಿ ಡಿಕ್ಕಿ; ಚಾಲಕರಿಬ್ಬರು ದುರ್ಮರಣ

ಸಮಗ್ರ ನ್ಯೂಸ್: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಚಾಲಕರಿಬ್ಬರು ಮೃತಪಟ್ಟ ಘಟನೆ ಮಂಗಳೂರು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿ ನಡೆದಿದೆ.

Ad Widget ... ..

ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

Ad Widget

ಸದ್ಯ ಓರ್ವನನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದು, ಇನ್ನೊರ್ವನ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಯಿತ್ತಿದೆ.

Leave a Comment

Your email address will not be published. Required fields are marked *