Ad Widget .

ಬೆಂಗಳೂರು ಮೂಲದ ಯುವಕನ ಶವ ಮಂಗಳೂರಿನಲ್ಲಿ ಪತ್ತೆ| ಲಾಡ್ಜ್ ನಲ್ಲಿ ತಂಗಿದ್ದವ ಬಾವಿಯಲ್ಲಿ ಹೆಣವಾಗಿದ್ದೇಗೆ?

ಸಮಗ್ರ ನ್ಯೂಸ್: ಮಂಗಳೂರಿನ ಉಳ್ಳಾಲ‌ ಸಮೀಪದ ತೊಕ್ಕೊಟ್ಟಿನ ಲಾಡ್ಜ್ ವೊಂದರಲ್ಲಿ ತಂಗಿದ್ದ ಬೆಂಗಳೂರು ಮೂಲದ ಯುವಕನ ಮೃತದೇಹ ಸಮೀಪದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಹಕಾರದಿಂದ ಮೃತದೇಹ ಮೇಲಕ್ಕೆ ಎತ್ತಲಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್‌ ಎ.ಎಸ್‌. (36) ಮೃತ ಯುವಕ. ನ. 30ರಂದು ತೊಕ್ಕೊಟ್ಟಿಗೆ ಬಂದಿದ್ದ ಆತ ಲಾಡ್ಜ್ನಲ್ಲಿ ತಂಗಿದ್ದರು. ಆ ಬಳಿಕ ಹೊರಗೆ ತೆರಳಿದವರು ವಾಪಸಾಗಿರಲಿಲ್ಲ. ಡಿ. 1ರಂದು ಸಂಜೆ ರೂಂಗೆ ಬಂದು ತಪಾಸಣೆ ನಡೆಸಿದಾಗ ಮಹಾಂತೇಶ್‌ ಇರಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಡಿ. 2ರಂದು ಬೆಂಗಳೂರಿನ ಮಹಾಂತೇಶ್‌ ಸಹೋದರಿ ಉಳ್ಳಾಲ ಠಾಣೆಯಲ್ಲಿ ಸಹೋದರ ನಾಪತ್ತೆ ಕುರಿತು ದೂರು ದಾಖಲಿಸಿದ್ದರು.

Ad Widget . Ad Widget .

ರವಿವಾರ ಮಧ್ಯಾಹ್ನ ಅಬ್ದುಲ್‌ ಸಮದ್‌ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್‌ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮದ್‌ ಮನೆ ಕೆಲಸದಾಕೆ ಸುಗಂಧಿ ಎಂಬವರು ಬಾವಿಯೊಳಗೆ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ಕಂಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *