ಬೆಂಗಳೂರು ಮೂಲದ ಯುವಕನ ಶವ ತೊಕ್ಕೊಟ್ಟು ಬಳಿ ಬಾವಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರು ಮೂಲದ ಯುವಕನ ಮೃತದೇಹ ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

Ad Widget ... ..

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36) ಮೃತ ಯುವಕ.

Ad Widget

ನವೆಂಬರ್ 30ರಂದು ಬೆಂಗಳೂರಿನಿಂದ ತೊಕ್ಕೊಟ್ಟಿಗೆ ಬಂದಿದ್ದ ಮಹಾಂತೇಶ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು. ರಾತ್ರಿ ಲಾಡ್ಜ್ ನಿಂದ ತೆರಳಿದವರು ವಾಪಸ್ಸಾಗಿರಲಿಲ್ಲ. ಡಿಸೆಂಬರ್ 1 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್ ಬಾಯ್ ರೂಮಿಗೆ ಬಂದು ತಪಾಸಣೆ ನಡೆಸಿದಾಗ ಮಹಾಂತೇಶ್ ಇರಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ನವೆಂಬರ್ 2ರಂದು ಬೆಂಗಳೂರಿನ ಮಹಾಂತೇಶ್ ಸಹೋದರಿ ಉಳ್ಳಾಲ ಠಾಣೆಯಲ್ಲಿ ಸಹೋದರ ನಾಪತ್ತೆ ಕುರಿತು ದೂರು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನದ ವೇಳೆಗೆ ಅಂಬಿಕಾ ರೋಡ್ ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *