ಕೈ ಇಟ್ಟಲ್ಲೆಲ್ಲಾ ಕೈಚಳಕ ಮೆರೆದ ಜನನಾಯಕನ ಪತ್ನಿ| ಮದುವೆ ಮನೆಯಲ್ಲಿ ಬರೋಬ್ಭರಿ 3.80 ಲಕ್ಷ ಎಗರಿಸಿದ ಕಿಲಾಡಿ ಮಹಿಳೆ

ಸಮಗ್ರ ನ್ಯೂಸ್ ರಾಜಕಾರಣಿಯೊಬ್ಬರ ಪತ್ನಿ ಮದುವೆ ಮನೆ ಹಾಗೂ ಗಿಫ್ಟ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

Ad Widget ... ..

ಬೀದರ್ ನಗರದ ನಾವದಗೇರಿಯ ಸಂತೋಷಿ ಶಿವರಾಜ ಕೊಳ್ಳೂರ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪಕ್ಕೆ ಆಹ್ವಾನಿತರಂತೆ ಬಂದು ಮದುಮಕ್ಕಳ ಕೊಠಡಿಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು.

Ad Widget

ಸಿಪಿಐ ಕಪೀಲ್ ನೇತೃತ್ವದ ತಂಡದಿಂದ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಬಂಧಿತ ಆರೋಪಿಯಿಂದ ₹ 3.80 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಗಿಫ್ಟ್​ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಪತ್ನಿಯ ಈ ಖತರ್ ನಾಕ್ ಕೆಲಸದಿಂದ ಪತಿಗೆ ಮುಜುಗರ ಉಂಟಾಗಿದೆ.

Leave a Comment

Your email address will not be published. Required fields are marked *