ಬೈಕ್ ಗೆ ಡಿಕ್ಕಿ ಹೊಡೆದ ಎಂಎಲ್ಸಿ ರವಿಕುಮಾರ್ ಕಾರು

ಸಮಗ್ರ ನ್ಯೂಸ್: ಬೈಕ್‌ ಸವಾರನಿಗೆ ಎಂಎಲ್‌ಸಿ ರವಿಕುಮಾರ್‌ ಕಾರು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರನಿಗೆ ಗಾಯವಾಗಿದೆ. ಇದೇ ವೇಳೆ ಗಾಯಾಳುವಿನ ಸಹಾಯಕ್ಕೆ ಬಾರದ ಹಿನ್ನಲೆಯಲ್ಲಿ ಅವರಿಗೆ ಸ್ಥಳೀಯ ಜನತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

Ad Widget ... ..

ಕೋಲಾರ ತಾಲೂಕಿನ ಲಕ್ಷ್ಮಿಸಾಗರ ಬಳಿ ಈ ಅಪಘಾತವಾಗಿದ್ದು, ರವಿಕುಮಾರ್‌ ಇದ್ದ ಕಾರು ಬೈಕ್‌ ಸವಾರಿನಿಗೆ ಗುದ್ದಿದೆ ಎನ್ನಲಾಗಿದೆ. ಅಪಘಾತ ಸ್ಥಳಕ್ಕೆ ವೇಮಗಲ್ ಪೋಲಿಸರು ಆಗಮಿಸಿ, ಸ್ಥಳಿಯರನ್ನು ಸಮಾಧಾನ ಮಾಡಿ, ಗಾಯಾಳುವನ್ನು ಹತ್ತಿರದ ಆಸ್ಪತ್ತೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ ಅಂತ ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *