Ad Widget .

ಬೆಂಗಳೂರು: ದೀಪಾವಳಿ ಬಲೀಂದ್ರ ಹಬ್ಬ ಆಚರಣೆ| ಬದುಕು ಕಟ್ಟುವ ಜೊತೆಗೆ ಆಚರಣೆಗಿರಲಿ ಮನ್ನಣೆ- ಕಜೆಗದ್ದೆ

ಸಮಗ್ರ ನ್ಯೂಸ್: ಬದುಕು ಕಟ್ಟಿಕೊಳ್ಳಲು ಬಂದವರು ನಮ್ಮ ಆಚರಣೆ, ಪದ್ದತಿ ಬಿಟ್ಟು ಹೋಗಬಾರದೆಂದು ಈ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಹೇಳಿದರು.

Ad Widget . Ad Widget .

ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿಯ ಕರ್ನಾಟಕ ಸಚಿವಾಲಯ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ದೀಪಾವಳಿ ಬಲೀಂದ್ರ ಹಬ್ಬದ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Ad Widget . Ad Widget .

ಕೃಷಿ ಸಂಸ್ಕೃತಿಯ ಹಿನ್ನೆಲೆ ಉಳ್ಳ ನಾವು ಬಲೀಂದ್ರನನ್ನು ನೆನೆಸಿಕೊಂಡು ಸೇರಿಕೊಳ್ಳುವ ಕಾರ್ಯಕ್ರಮ ಇದಾಗಿದ್ದು, ಸಂಬಂಧವನ್ನು ತಲೆಮಾರಿನುದ್ದಕ್ಕು ಬೆಸೆಯುವ ಕೊಂಡಿಯಾಗಿ ಯುವಜನರು ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಓಂ ಪ್ರಕಾಶ್ ವಹಿಸಿಕೊಂಡರು. ಈ ಸಂದರ್ಭದಲ್ಲಿ ಜೀ ಕನ್ನಡ ಡ್ರಾಮಾ ಜೂನಿಯರ್ ಖ್ಯಾತಿಯ ತುಷಾರ್ ಗೌಡ ಸುಳ್ಯ ಮತ್ತು ಬಾಲ ಪ್ರತಿಭೆ ಜ್ಞಾನ ಮತ್ತು ನಾಮಧಾರಿ ಬೀಜತಳಿ ಸಂಶೋಧಕ ಶಿವಪ್ಪ ಗೌಡರನ್ನು ಸನ್ಮಾನಿಸಲಾಯಿತು.

ಅರೆಭಾಷೆ ಅಕಾಡೆಮಿಯ ಉದ್ದಾರಕ್ಕೆ ಶ್ರಮಿಸಿದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರನ್ನು ಗೌರವಿಸಲಾಯಿತು. ಈ ವೇಳೆ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಪುರುಷೋತ್ತಮ ಎಂ.,ಬಿ ನಾರಾಯಣ,ಹಿರಿಯಪ್ಪ ಗೌಡ ಪೋಸಂತೋಡಿ, ವಿಶ್ವಾಸ್ ಮಡ್ತಿಲ, ಕುಸುಮಾಧರ ಗೌಡ, ನಳಿನಾಕ್ಷ ಗೌಡ ಬೋಜಾರ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀ ದೇವಿ ಮಹಿಷಾಮರ್ದಿನಿ ಯಕ್ಷಗಾನ ನಡೆಯಿತು.

Leave a Comment

Your email address will not be published. Required fields are marked *