Ad Widget .

10ವರ್ಷದ ಬಾಲಕಿಯ ಬರ್ಬರ ಹತ್ಯೆ| ಹೊಟ್ಟೆ ಸೀಳಿ ಅಂಗಾಂಗ ಹೊರತೆಗೆದು ವಿಕೃತಿ

ಸಮಗ್ರ ನ್ಯೂಸ್: ಹತ್ತು ವರ್ಷದ ಬಾಲಕಿಯೋರ್ವಳನ್ನು ಭೀಕರ ಸ್ವರೂಪದಲ್ಲಿ ಹತ್ಯೆಗೈಯಲಾಗಿದೆ. ಈಕೆಯ ಹತ್ಯೆಗೆ ತಂದೆಯ ಮೇಲಿನ ಹಗೆತನವೇ ಕಾರಣವೆಂದು ಹೇಳಲಾಗಿದೆ.

Ad Widget . Ad Widget .

ಉತ್ತರ ಪ್ರದೇಶದ ಪೀಲೀಭೀತ್​​ನಲ್ಲಿ 10 ವರ್ಷದ ಬಾಲಕಿಯನ್ನು ಅತ್ಯಂತ ಭೀಕರ ಸ್ವರೂಪದಲ್ಲಿ ಹತ್ಯೆಗೈಯಲ್ಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಕೆಯ ಮೃತದೇಹ ಮನೆ ಸಮೀಪದ ಗೋಧಿ ಹೊಲದಲ್ಲಿ ಪತ್ತೆಯಾಗಿದೆ. ಆದರೆ ಆಕೆಯ ಮೃತದೇಹ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.

Ad Widget . Ad Widget .

ಬಾಲಕಿಯ ಹೊಟ್ಟೆಯನ್ನು ಕತ್ತರಿಸಲಾಗಿದ್ದು, ಹೊಟ್ಟೆ ತೆರೆದ ಸ್ಥಿತಿಯಲ್ಲಿದೆ. ಒಳಗಿನ ಅಂಗಾಂಗಳನ್ನೆಲ್ಲ ಕಿತ್ತು, ಅಲ್ಲೇ ಎಸೆಯಲಾಗಿದೆ. ಅತ್ಯಂತ ಕ್ರೂರವಾಗಿ, ಇಡೀ ದೇಹವನ್ನು ವಿರೂಪಗೊಳಿಸಿ ಹತ್ಯೆ ಮಾಡಲಾಗಿದೆ.

10 ವರ್ಷದ ಬಾಲಕಿ ಶುಕ್ರವಾರ ತನ್ನ ಚಿಕ್ಕಪ್ಪ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಜಾತ್ರೆಯೊಂದಕ್ಕೆ ಹೋಗಿದ್ದಳು. ಆಗಲೇ ಕಣ್ಮರೆಯಾಗಿದ್ದಳು. ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ಎರಡು ದಿನಗಳ ಬಳಿಕ ಆಕೆ ಮೃತದೇಹ ಮಾಧೋಪುರ ಎಂಬ ಗ್ರಾಮದ ಹೊರವಲಯದಲ್ಲಿರುವ ಗೋಧಿ ಹೊಲದಲ್ಲಿ ಸಿಕ್ಕಿದೆ. ಆಕೆಯ ಚಪ್ಪಲಿಯೂ ಅಲ್ಲೇ ಇದೆ ಎಂದು ಸ್ಥಳೀಯ ಎಸ್​​ಪಿ ದಿನೇಶ್​ ಕುಮಾರ್ ಪ್ರಭು ಮಾಹಿತಿ ನೀಡಿದ್ದಾರೆ.

ಈ ಕೇಸ್​​ನಲ್ಲಿ ಶಕಿಲ್ ವೈಸ್ತವ್​ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈತನಿಗೆ ಬಾಲಕಿಯ ತಂದೆಯೊಂದಿಗೆ ವೈರತ್ವ ಇತ್ತು ಎನ್ನಲಾಗಿದ್ದು, ಕುಟುಂಬದವರು ಇವನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಪೋಸ್ಟ್​ಮಾರ್ಟಂಗೆ ಕಳಿಸಲಾಗಿದೆ.

Leave a Comment

Your email address will not be published. Required fields are marked *