ಸಮಗ್ರ ನ್ಯೂಸ್: ರೌಡಿಗೆ ಶಾಲು ಹೊದೆಸಿ ಪಕ್ಷಕ್ಕೆ ಸ್ವಾಗತಿಸಿದ ಆರೋಪಕ್ಕೆ ಗುರಿಯಾದ ಸಂಸದ ಪ್ರತಾಪ್ ಸಿಂಹ ಈ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಮೈಸೂರು ಬಿಜೆಪಿ ಕಚೇರಿಯಲ್ಲಿ ಹೋಗಿದ್ದಾಗ ಶಾಲು ಹಾಕಿದೆ, ಅಪ್ಪಣ್ಣ ಅವರು ಎಚ್.ಡಿಕೋಟೆ ಭಾಗದಲ್ಲಿ ಕೆಲವರನ್ನ ಪಕ್ಷಕ್ಕೆ ಸೇರಿಸಿಕೊಂಡರು, ಆ ಕಾರ್ಯಕ್ರಮದಲ್ಲಿ ಶಾಲು ಹಾಕಿ ಸ್ವಾಗತ ಮಾಡಿದೆ, ಬೆತ್ತನೆಗೆರೆ ಶಂಕರ್ ನ ಬಗ್ಗೆ ನನಗೆ ಗೊತ್ತಿಲ್ಲ.ಪಕ್ಷ ಸೇರ್ಪಡೆಗೆ ಸಾವಿರಾರು ಜನರು ಬರುತ್ತಾರೆ.
ಅವರ ಕುಂಡಲಿ, ಜಾತಕ ತೆಗೆದುಕೊಂಡು ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ.
ರೌಡಿಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುವ ಕಾಲ ಹೋಗಿದೆ. ಇದನ್ನ
ಅನಗತ್ಯವಾಗಿ ಬಿಂಬಿಸುತ್ತಿದ್ದಾರೆ. ಕೊತ್ವಾಲ ರಾಮಚಂದ್, ಜಯರಾಜ್,ಆಯಿಲ್ ಕುಮಾರ್,ಬೆಕ್ಕಿನಕಣ್ಣು ರಾಜೇಂದ್ರ ಇಂತವರನ್ನ ಇಟ್ಟುಕೊಂಡು ರಾಜಕಾರಣ ಮಾಡಿದವರು ಯಾರು.. ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಪ್ರತ್ಯೇಕದವಾದಿಗಳ ಬಾಯಿ ಮುಚ್ಚಿಸಿದ್ದೇವೆ.
ನಮಗೆ ರೌಡಿಗಳ ಅವಶ್ಯಕತೆ ಇಲ್ಲ.
ನನಗೆ ರೌಡಿಗಳ ಅವಶ್ಯಕತೆ ಇಲ್ಲ.
ನನ್ನದು ಅಭಿವೃದ್ಧಿ ರಾಜಕಾರಣ.ನನ್ನ ಹತ್ತಿರ ಎಲ್ಲರನ್ನೂ ಎದುರಿಸುವ ಶಕ್ತಿ ಇದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಗೆದ್ದು ಬಂದಿದ್ದೇನೆ.ಮೋದಿ ಕಾಲದಲ್ಲಿ ಭಯೋತ್ಪಾದಕರನ್ನೇ ಬಿಟ್ಟಿಲ್ಲ ನಮ್ಮನ್ನ ಬಿಡುತ್ತಾರಾ ಎಂದು ರೌಡಿಗಳ ಭಯಗೊಂಡಿದ್ದಾರೆ.
ರೌಡಿಗಳೇ ಮನಪರಿವರ್ತನೆಯಾಗಿ ಸಮಾಜಸೇವೆಗೆ ಬರುತ್ತಿದ್ದಾರೆ.
ಬಿಜೆಪಿ ಗಟ್ಟಿಯಾದ ನಾಯಕತ್ವ ಕೊಟ್ಟಿದೆ.
ಎಷ್ಟೋ ಜನ ಸಮಾಜ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ.
ಇದೇ ದೊಡ್ಡ ವಿಚಾರ ಮಾಡುವುದು ಬೇಡ ಎಂದು ಮನವಿ ಮಾಡಿದರು.