Ad Widget .

ಬೆಳ್ತಂಗಡಿ : ಮೋಜಿಗಾಗಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ‌ ಸಾವು| ಜೀವ ಕಸಿದ ವೀಕೆಂಡ್ ರೈಡ್

ಸಮಗ್ರ ನ್ಯೂಸ್: ಮೋಜಿಗಾಗಿ ಸ್ನೇಹಿತರ ಜತೆ ಬೆಳ್ತಂಗಡಿ ತಾಲೂಕಿನಲ್ಲಿರುವ ಎಮಾ೯ಯಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು (ಡಿ.3) ನಡೆದಿದೆ. ಧಮ೯ಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆ ಪದವಿ ಪೂವ೯ ಕಾಲೇಜಿನ ವಿದ್ಯಾರ್ಥಿ ವಿವೇಕ್ (17ವ) ಮೃತಪಟ್ಟ ದುರ್ದೈವಿ.

Ad Widget . Ad Widget .

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪ ಮಲವಂತಿಗೆ ಬಳಿ ಇರುವ ಪ್ರಸಿದ್ದ ಪ್ರವಾಸಿ ತಾಣ ಎಮಾ೯ಯಿ ಫಾಲ್ಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಶನಿವಾರದ ಕಾರಣ ಇಂದು ಮಧ್ಯಾಹ್ನ ನಂತರ ಕಾಲೇಜಿಗೆ ರಜೆಯಿತ್ತು. ಹೀಗಾಗಿ ದ್ವಿತೀಯ ಪಿಯುಸಿಯ 7 ವಿದ್ಯಾರ್ಥಿಗಳ ಗುಂಪೊಂದು ಮೂರು ಬೈಕಿನಲ್ಲಿ ಮಿತ್ತಬಾಗಿಲು ಗ್ರಾಮದ ಏಳೂವರೆ ಹಳ್ಳ ಎಮಾ೯ಯಿ ಫಾಲ್ಸ್ ಗೆ ಬಂದಿದ್ದಾರೆ.

Ad Widget . Ad Widget .

ಸಂಜೆ ನಾಲ್ಕು ಗಂಟೆ ಸುಮಾರಿಗೆ ಸ್ನೇಹಿತರ ಜತೆ ವಿವೇಕ್‌ ಈಜಾಟ ಆಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ ಎನ್ನಲಾಗಿದೆ. ಈ ವೇಳೆ ಜತೆಗಿದ್ದವರು ಜೋರಾಗಿ ಬೊಬ್ಬೆ ಹಾಕಿದ್ದಾರೆ. ಕಿರುಚಾಟ ಕೇಳಿ ಬಂದ ಸ್ಥಳೀಯರೊಬ್ಬರು ನೀರಿನಲ್ಲಿ ಹುಡುಕಾಟ ನಡೆಸಿ ಯುವಕನನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಬಳಿಕ ತಕ್ಷಣ ಅಲ್ಲಿಂದ ಜೀಪಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಘಟನೆ ಸಂಬಂಧ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *