ಸಮಗ್ರನ್ಯೂಸ್: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
‘ಮುಸ್ಲಿಂ ಪುರುಷರು 20ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮತ್ತೊಂದೆಡೆ, ಹಿಂದೂಗಳು ಮದುವೆಗೆ ಮೊದಲು ಒಬ್ಬ, ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ. ನೀವೂ ಸಹ ಶಿಶುಗಳಿಗೆ ಜನ್ಮ ನೀಡಿ, ಆನಂದಿಸಿ ಮತ್ತು ಹಣವನ್ನು ಉಳಿಸಿ’ ಎಂದು ಬದ್ರುದ್ದೀನ್ ಅಜ್ಮಲ್ ಸಲಹೆ ನೀಡಿದ್ದಾರೆ.
ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಎಐಡಿಯುಎಫ್ ಮುಖ್ಯಸ್ಥರನ್ನು ಕೇಳಿದಾಗ, ’40 ವರ್ಷ ವಯಸ್ಸಿನ ನಂತರ ಹಿಂದುಗಳು ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಹಾಗಾದರೆ, ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ?, ನೀವು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಮಾತ್ರ ಉತ್ತಮ ಬೆಳೆಗಳನ್ನು ಹೊಂದಬಹುದು’ ಎಂದು ಅವರು ಹೇಳಿದ್ದಾರೆ.
‘ಅವರು (ಹಿಂದೂಗಳು) ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22 ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು’ ಎಂದು ತಿಳಿಸಿದ್ದಾರೆ.