ಪುತ್ತೂರು: ಕುಡಿದು ತಮ್ಮನನ್ನೇ ಕಡಿದ ಅಣ್ಣ

ಸಮಗ್ರ ನ್ಯೂಸ್: ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.

Ad Widget ... ..

ಕಾರ್ಮಿಕರಾಗಿರುವ ಹಾವೇರಿ ಜಿಲ್ಲೆಯ ಹೊಸೂರು ಮೂಲದ ನಿಂಗನ ಗೌಡ, ಒಡಹುಟ್ಟಿದ ತಮ್ಮ ಮಾದೇವಪ್ಪನನ್ನು ಕೊಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ.

Ad Widget

ಪುತ್ತೂರಿನ ಕೆಮ್ಮಿಂಜೆಯಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ ಸಹೋದರರಿಬ್ಬರು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜಗಳ ನಡೆಸಿದ್ದು, ಈ ವೇಳೆ ನಿಂಗನ ಗೌಡನು, ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಪುತ್ತೂರು ನಗರ ಠಾಣೆಯಲ್ಲಿ ಕಲಂ 302 IPC ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಆರೋಪಿ ನಿಂಗನ ಗೌಡ ಪರಾರಿಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಎಲ್ಲಾದರು ಕಂಡುಬಂದಲ್ಲಿ ಪುತ್ತೂರು ನಗರ ಠಾಣೆಗೆ ತಿಳಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *