ಒಂದೇ ಓವರ್ ನಲ್ಲಿ 6 ವಿಕೆಟ್ ಪತನ| ಬೌಲರ್ ಯಾರು ಗೊತ್ತಾ?

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ವಿಜಯ್ ಹಜಾರೆ ಟ್ರೋಫಿ 2022 ರ ಕ್ವಾರ್ಟರ್‌ಫೈನಲ್‌ನಲ್ಲಿ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Ad Widget ... ..

ಇದೀಗ ಬೌಲರ್ ಒಬ್ಬರು ಒಂದೇ ಓವರ್ ನಲ್ಲಿ ಅಂದರೆ ಆರು ಎಸೆತಗಳಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಗೆ ಅಟ್ಟಿ ಸಾಧನೆಯನ್ನು ಮಾಡಿದ್ದಾರೆ . ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲರ್‌ಯೊಬ್ಬರು ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿದಂತಹ ಸಾಧನೆ ಇದುವರೆಗೆ ಯಾರು ಮಾಡಿಲ್ಲ, ಆದರೆ ಈ ದಾಖಲೆ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆಯುತ್ತಿರುವ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರ್ಮಾಣಗೊಂಡಿದೆ.

Ad Widget

ಮಹಾರಾಷ್ಟ್ರದ ಪನ್ವೇಲ್ ಹಲವು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಒಂದು ನಗರವಾಗಿದೆ. ಉಸ್ಲಾರಿ ಖುರ್ದ್‌ನಲ್ಲಿ ನಡೆಯುತ್ತಿರುವ ಗಾಂವದೇವಿ ಉಸಾರಯಿ ಚಕ್ಸ್ 2022 ಪಂದ್ಯಾವಳಿಯಲ್ಲಿ, ಲಕ್ಷ್ಮಣ್ ಎಂಬ ಈ ಬೌಲರ್ ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಡೊಂಡ್ರಾಚಾಪಡಾ ಮತ್ತು ಗಾವದೇವಿ ಪೇಠ ನಡುವೆ ಈ ಪಂದ್ಯ ನಡೆಯುತ್ತಿತ್ತು. ಡೊಂಡ್ರಾಚಾಪಡಾ ಗೆಲುವಿಗೆ 43 ರನ್‌ಗಳ ಅಗತ್ಯವಿತ್ತು. ಆದರೆ ಮೊದಲ ಓವರ್‌ನಲ್ಲಿಯೇ ತಂಡದ ಆರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದಾರೆ. ಈ ಓವರ್‌ನಲ್ಲಿ ಲಕ್ಷ್ಮಣ್ ಒಂದೇ ಒಂದು ರನ್ ನೀಡಿಲ್ಲ ಅಥವಾ ಯಾವುದೇ ಹೆಚ್ಚುವರಿ ಬೌಲ್ ಎಸೆದಿಲ್ಲ ಎಂಬುದು ಇಲ್ಲಿ ವಿಶೇಷವಾಗಿದೆ.

Leave a Comment

Your email address will not be published. Required fields are marked *