ಎಲ್ಐಸಿ ನೀಡ್ತಾ ಇದೆ ವಾಟ್ಸಪ್ ಸೇವೆ| ಈ ನಂಬರ್ ನಲ್ಲಿ ಸಿಗಲಿದೆ ಸಂಪೂರ್ಣ ಸೇವಾ ವಿವರ

ಸಮಗ್ರ ನ್ಯೂಸ್: ದೇಶದಲ್ಲಿ ಹಲವಾರು ಮಂದಿ ವಾಟ್ಸಾಪ್ ಬಳಕೆ ಮಾಡುತ್ತಾರೆ. ಹೀಗಿರುವಾಗ ಪ್ರಮುಖ ಸಂಸ್ಥೆಗಳು ತಮ್ಮ ಸೇವೆಯನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ. ಈಗ ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದೆ.

Ad Widget ... ..

ಶುಕ್ರವಾರ ಎಲ್‌ಐಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. ಎಲ್‌ಐಸಿ ಪಾಲಿಸಿಯನ್ನು ಹೊಂದಿರುವವರು ಎಲ್‌ಐಸಿ ಸೇವೆಯನ್ನು ಎಲ್‌ಐಸಿ ಪೋರ್ಟಲ್‌ ಬದಲಾಗಿ ವಾಟ್ಸಾಪ್ ಮೂಲಕವೇ ಪಡೆಯಬಹುದು. ನೀವು 8976862090 ಸಂಖ್ಯೆಗೆ HI (ಹಾಯ್) ಎಂದು ಕಳುಹಿಸುವ ಮೂಲಕ ವಾಟ್ಸಾಪ್ ಸೇವೆಯನ್ನು ಪಡೆಯಬಹುದು.

Ad Widget

ಎಲ್‌ಐಸಿ ಪೋರ್ಟಲ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ರಿಜಿಸ್ಟರ್ ಮಾಡಿದ ಬಳಿಕ ಪಾಲಿಸಿದಾರರು ವಾಟ್ಸಾಪ್ ಸೇವೆಯನ್ನು ಪಡೆಯಬಹುದು. ಅದಕ್ಕಾಗಿ ನೀವು 8976862090 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ವಾಟ್ಸಾಪ್ ಮೂಲಕ 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ಸೇವೆಯನ್ನು ಪಡೆಯುವುದನ್ನು ಆರಂಭಿಸಬಹುದು.

ಈ ಸೇವೆಯಲ್ಲಿ ಪಾಲಿಸಿ ಮೊತ್ತ, ಪ್ರೀಮಿಯಂ, ಪಾಲಿಸಿ ಸ್ಟೇಟಸ್, ಬೋನಸ್ ಸೇರಿದಂತೆ ಇನ್ನಿತರ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *