Ad Widget .

ವಿದ್ಯಾರ್ಥಿನಿಯನ್ನು ಕೊಂದು ತಿಂದವ ನಿಧನ|ಯಾರಿವ ನರಭಕ್ಷ…!!!

ಟೋಕಿಯೊ: ವಿದ್ಯಾರ್ಥಿನಿಗೆ ಗುಂಡು ಹಾರಿಸಿ ಅತ್ಯಾಚಾರವೆಸಗಿ ನಂತರ ಆಕೆಯ ಮೃತದೇಹವನ್ನು ತುಂಡುಗಳಾಗಿಸಿ ಹಲವು ದಿನಗಳವರೆಗೆ ಇಟ್ಟುಕೊಂಡು ಸೇವಿಸಿ ಜೈಲು ಶಿಕ್ಷೆಯಿಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದ ಜಪಾನ್‌ ವ್ಯಕ್ತಿ ನಿಧನ ಹೊಂದಿದ್ದಾನೆ.

Ad Widget . Ad Widget .

ʼಕೋಬ್ ಕ್ಯಾನಿಬಾಲ್ʼ (ನರಭಕ್ಷಕ) ಎಂದೇ ಕುಖ್ಯಾತಿಯಾಗಿದ್ದ ಜಪಾನಿನ ಕೊಲೆಗಾರ ಇಸ್ಸೆ ಸಗಾವಾ (Issei Sagawa), ಕೊಲೆ ಮಾಡಿದ್ದರೂ ಜೈಲು ಶಿಕ್ಷೆ ಅನುಭವಿಸದೇ ಸ್ವತಂತ್ರನಾಗಿ ಇದ್ದ. ಇದೀಗ ತನ್ನ 73ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾನೆ. ಸಗಾವಾ, ನ್ಯುಮೋನಿಯಾದಿಂದ ಸಾವಿಗೀಡಾಗಿದ್ದು, ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Ad Widget . Ad Widget .

1981 ರಲ್ಲಿ ಸಗಾವಾ ಪ್ಯಾರಿಸ್‌ನಲ್ಲಿ ಓದುತ್ತಿದ್ದಾಗ ಡಚ್ ವಿದ್ಯಾರ್ಥಿನಿ ರೆನೀ ಹಾರ್ಟೆವೆಲ್ಟ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದ. ನಂತರ ಅವಳಿಗೆ ಗುಂಡು ಹಾರಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ತುಂಡುಗಳಾಗಿಸಿ ಹಲವು ದಿನಗಳವರೆಗೆ ಮನೆಯಲ್ಲಿಟ್ಟುಕೊಂಡು ಸೇವಿಸಿದ್ದಾನೆ.

ಮೃತದೇಹದ ಕೆಲವು ತುಂಡುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆಯುವಾಗ ಪೊಲೀಸರಿಗೆ ಸಿಕ್ಕಿಬೀಳುತ್ತಾನೆ. ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಳ್ಳುತ್ತಾನೆ. ಆದರೆ 1983 ರಲ್ಲಿ ಫ್ರೆಂಚ್ ವೈದ್ಯಕೀಯ ತಜ್ಞರು ಆತ ವಿಚಾರಣೆಗೆ ಅನರ್ಹ ಎಂದು ಹೇಳುತ್ತಾರೆ. ಬಳಿಕ 1984 ರಲ್ಲಿ ಜಪಾನ್‌ಗೆ ಈತನನ್ನು ವಾಪಸ್‌ ಕಳುಹಿಸಲಾಗುತ್ತದೆ. ಈತನ ಅಪರಾಧ ಕೃತ್ಯದ ಫೈಲ್‌ಗಳನ್ನು ಫ್ರೆಂಚ್‌ನಿಂದ ಜಪಾನ್‌ಗೆ ಕಳುಹಿಸುವುದಿಲ್ಲ. ಹೀಗಾಗಿ ಆತನನ್ನು ಜಪಾನ್‌ನಲ್ಲಿ ಸ್ವತಂತ್ರವಾಗಿರಲು ಬಿಡಲಾಗುತ್ತದೆ.

ಸಗಾವಾ ತಾನು ಮಾಡಿದ ಕೊಲೆಯ ಬಗ್ಗೆಯೇ ʼಇನ್‌ ದಿ ಫಾಗ್‌ʼ ಎಂಬ ಹೆಸರಿನಲ್ಲಿ ಪುಸ್ತಕ ಕೂಡ ಬರೆಯುತ್ತಾನೆ. ಅಷ್ಟೇ ಅಲ್ಲ, 1982 ರಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದ ಜಪಾನಿನ ಕಾದಂಬರಿಕಾರ ಜೂರೋ ಕಾರಾ ಅವರ ʼಲೆಟರ್ ಫ್ರಮ್ ಸಾಗವಾ-ಕುನ್ʼ ನ ವಿಷಯವೂ ಈ ಕೊಲೆಯಾದ್ದೇ ಆಗಿದೆ.

Leave a Comment

Your email address will not be published. Required fields are marked *