Ad Widget .

ಮದ್ಯ ಸೇವನೆ ವೇಳೆ ಅತ್ತ ಕಂದಮ್ಮ| ಕತ್ತು ಹಿಸುಕಿ ಪುತ್ರಿಯನ್ನೇ ಕೊಂದ ಪಾಪಿ ತಂದೆ

ಸಮಗ್ರ ನ್ಯೂಸ್: ಮದ್ಯ ಸೇವಿಸುತ್ತಿದ್ದ ವೇಳೆ ಮಗು ಅಳುತ್ತಿದ್ದಕ್ಕೆ ತಂದೆಯೇ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆ ಬದ್ದೇಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. 9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ರಾಮು(30) ಮಗುವನ್ನು ಕೊಂದ ಪಾಪಿ ತಂದೆ.

Ad Widget . Ad Widget .

ರಾಮು ಮನೆಯಲ್ಲಿ ರಾಮು ಮದ್ಯ ಸೇವಿಸುತ್ತಿದ್ದಾಗ ತನುಶ್ರೀ ಅಳುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಕೃತ್ಯವೆಸಗಿದ್ದಾನೆ. ತನುಶ್ರೀ ಕುತ್ತಿಗೆಯಲ್ಲಿದ್ದ ದಾರ ಹಿಡಿದು ಮೇಲೆ ಎತ್ತಿದ್ದಾನೆ. ಉಸಿರುಗಟ್ಟಿ ತನುಶ್ರೀ ಸಾವನ್ನಪ್ಪಿದ್ದಾಳೆ.

Ad Widget . Ad Widget .

ಪತ್ನಿ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲೇ ಮದ್ಯ ಸೇವಿಸುತ್ತಿದ್ದ ರಾಮು ಪುತ್ರಿಯ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಸೈದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *