November 2022

ಸುರತ್ಕಲ್ ನ ಟೋಲ್ ಹೆಜಮಾಡಿಗೆ ಶಿಪ್ಟ್| ಪರಿಷ್ಕೃತ ದರ ಜಾರಿಗೊಳಿಸಿದ ಹೆದ್ದಾರಿ ಪ್ರಾಧಿಕಾರ| ಈಗ ಡಬ್ಬಲ್ ಅಲ್ಲ, ಅದಕ್ಕಿಂತಲೂ ಹೆಚ್ಚು!!

ಸಮಗ್ರ ನ್ಯೂಸ್: ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್‌ಗೇಟ್‌ನ ದರವನ್ನು ಪರಿಷ್ಕೃರಿಸಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದೆ. “ಕರ್ನಾಟಕ ಸರ್ಕಾರದ ನಿರಂತರ ವಿನಂತಿ/ಬೇಡಿಕೆ ಮೇರೆಗೆ, ಸ್ಥಳೀಯ ಸಾರ್ವಜನಿಕ/ವಿಐಪಿ ಒತ್ತಾಯಗಳ ಆಧಾರದ ಮೇಲೆ, ಸಕ್ಷಮ ಪ್ರಾಧಿಕಾರವು ಹೊಸ ಮಂಗಳೂರು ಬಂದರು ರಸ್ತೆಯ ಸುರತ್ಕಲ್ ಟೋಲ್ ಪ್ಲಾಜಾ (NITK ಹತ್ತಿರ, NH-66 ರ ಕ್ಯಾಂಪಸ್) ವಿಲೀನಕ್ಕೆ ಅನುಮೋದನೆ ನೀಡಿದೆ. ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನ (ಟೋಲ್) ಯೋಜನೆಯ ಅಡಿಯಲ್ಲಿ […]

ಸುರತ್ಕಲ್ ನ ಟೋಲ್ ಹೆಜಮಾಡಿಗೆ ಶಿಪ್ಟ್| ಪರಿಷ್ಕೃತ ದರ ಜಾರಿಗೊಳಿಸಿದ ಹೆದ್ದಾರಿ ಪ್ರಾಧಿಕಾರ| ಈಗ ಡಬ್ಬಲ್ ಅಲ್ಲ, ಅದಕ್ಕಿಂತಲೂ ಹೆಚ್ಚು!! Read More »

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ

ಸಮಗ್ರ ನ್ಯೂಸ್: ದೇಶದ ಹೆಮ್ಮೆಯ ಟಾಟಾ ಗ್ರೂಪ್ ರಮೇಶ್ ಜೆ ಚೌಹಾನ್ ಮಾಲೀಕತ್ವದ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿದ್ಧು ಒಟ್ಟು 7,000 ಕೋಟಿ ರೂ.ಗೆ ಈ ವಹಿವಾಟು ನಡೆದಿದೆ ಎನ್ನಲಾಗಿದೆ.ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ. ಟಾಟಾ ಸಮೂಹವು ತನ್ನ ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ. ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ Read More »

ನಟ ದರ್ಶನ್ ಫಾರ್ಮ್ ಹೌಸ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ|ಯುವಕನಿಗೆ 43 ವರ್ಷ ಜೈಲು ಶಿಕ್ಷೆ

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ವಿಶೇಷ ನ್ಯಾಯಾಲಯವು 43 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ 50,000 ದಂಡ ವಿಧಿಸಿದೆ. ಬಿಹಾರ ಮೂಲದ ಕಾರ್ಮಿಕ ಎಂ.ಡಿ.ನಾಜೀಮ್ ಪ್ರಕರಣ ಆರೋಪಿ. ಈತ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಮಾಲೀಕತ್ವದ ಟಿ ನರಸೀಪುರ ಮುಖ್ಯರಸ್ತೆಯಲ್ಲಿರುವ ವಿನೀಶ್ ದರ್ಶನ್ ಕಾಟೇವಾರಿ ಸ್ಟಡ್ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದ. ಈತ 10 ವರ್ಷದ ಬಾಲಕಿ ಮೇಲೆ ಲೈಂಗಿಕ ಅಪರಾಧ ಎಸಗಿದ್ದ.

ನಟ ದರ್ಶನ್ ಫಾರ್ಮ್ ಹೌಸ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ|ಯುವಕನಿಗೆ 43 ವರ್ಷ ಜೈಲು ಶಿಕ್ಷೆ Read More »

ಸುಳ್ಯ: ಅಟೋ ಚಾಲಕ ನಾಪತ್ತೆ| ಮಾಹಿತಿ ಸಿಕ್ಕಿದಲ್ಲಿ ಠಾಣೆಗೆ ತಿಳಿಸುವಂತೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ರಿಕ್ಷಾ ಚಾಲಕನಾಗಿರುವ ಯುವಕನೋರ್ವ ನಾಪತ್ತೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಐವರ್ನಾಡು ಪೇಟೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಯತೀಶ (32) ನಾಪತ್ತೆಯಾದವರು. ಇವರು ನ.21 ರಂದು ಮನೆಯಿಂದ ತನ್ನ ಅಟೋ ರಿಕ್ಷಾದಲ್ಲಿ ಪುತ್ತೂರಿಗೆ ಬಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಇದ್ದು ಫೋನ್ ಕೂಡಾ ಸಿಗದೆ ಇದ್ದುದರಿಂದ ಈ ಬಗ್ಗೆ ಮನೆಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ಯುವಕನ ಚಹರೆ:ಹೆಸರು. ಯತೀಶ್ ಪ್ರಾಯ

ಸುಳ್ಯ: ಅಟೋ ಚಾಲಕ ನಾಪತ್ತೆ| ಮಾಹಿತಿ ಸಿಕ್ಕಿದಲ್ಲಿ ಠಾಣೆಗೆ ತಿಳಿಸುವಂತೆ ಮನವಿ Read More »

ಮಂಗಳೂರು ಸ್ಪೋಟ ಪ್ರಕರಣ| ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ| ಉಗ್ರರ ಟಾರ್ಗೆಟ್ ನಲ್ಲಿ ಕರಾವಳಿಯ ಮೂರು ದೇವಾಲಯಗಳು

ಸಮಗ್ರ ನ್ಯೂಸ್: ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಇದೀಗ ಉಗ್ರರ ಮತ್ತೊಂದು ಕರಾಳ ಮುಖ ಬಯಲಾಗಿದ್ದು, ‘ಹಿಂದೂ’ ದೇವಾಲಯಗಳ ಸ್ಪೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ದರು ಎಂಬುದು ಗೊತ್ತಾಗಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ , ಮಂಗಳಾದೇವಿ ದೇವಾಲಯ, ಮಂಜುನಾಥ ಸ್ವಾಮಿ ದೇವಾಲಯಕ್ಕೂ ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಬಯಲಾಗಿದೆ. ಶಾರೀಖ್ ಮೊಬೈಲ್ ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ. ಅದೇ ರೀತಿ ಮಂಗಳೂರು

ಮಂಗಳೂರು ಸ್ಪೋಟ ಪ್ರಕರಣ| ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ| ಉಗ್ರರ ಟಾರ್ಗೆಟ್ ನಲ್ಲಿ ಕರಾವಳಿಯ ಮೂರು ದೇವಾಲಯಗಳು Read More »

ಡಿಸೆಂಬರ್ 2 ರಂದು ತುಳುವಿನಲ್ಲಿ ಕಾಂತಾರ….!!

ಸಮಗ್ರ ನ್ಯೂಸ್: ಕಾಂತಾರ ಸಿನೆಮಾವನ್ನು ತುಳು ಭಾಷೆಯಲ್ಲಿ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿ. 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಓಟಿಟಿಯಲ್ಲೂ ಕಾಂತಾರ ಸಿನೆಮಾ ಬಿಡುಗಡೆಯಾಗಿದ್ದು, ಇದೀಗ ತುಳುವಿನಲ್ಲಿ ಕಾಂತಾರದ ಟ್ರೈಲರ್ ಬಿಡುಗಡೆಯಾಗಿದೆ. ಕಾಂತಾರ ಸಿನಿಮಾ ದೈವಗಳ ಕಥೆ ಹೊಂದಿತ್ತು. ಕರಾವಳಿ ಭಾಗದ ಹಿನ್ನೆಲೆಯಿಂದ ರೂಪುಗೊಂಡ ಈ ಸಿನಿಮಾ, ಬಿಡುಗಡೆಯಾದ ಆರಂಭದಿಂದಲೂ ತುಳು ಭಾಷೆಗೆ ಡಬ್​ ಆಗಬೇಕು ಎಂಬ ಆಗ್ರಹ

ಡಿಸೆಂಬರ್ 2 ರಂದು ತುಳುವಿನಲ್ಲಿ ಕಾಂತಾರ….!! Read More »

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ಜಿಲ್ಲೆಯ ಹಲವು ಕಡೆ ಸ್ಯಾಟಲೈಟ್ ಫೋನ್ ರಿಂಗ್…

ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ಈ ಬಗೆಗಿನ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ. ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಫೋಟಕ್ಕೂ ಮುನ್ನಾ ದಿನ ಅಂದರೆ ನವೆಂಬರ್‌ 18ರಂದು ಬಂಟ್ವಾಳದ ಕಕ್ಕಿಂಜೆಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು, ನವೆಂಬರ್‌ 19ರ ಸಂಜೆ 4:29ರ ಹೊತ್ತಿಗೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು.

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ಜಿಲ್ಲೆಯ ಹಲವು ಕಡೆ ಸ್ಯಾಟಲೈಟ್ ಫೋನ್ ರಿಂಗ್… Read More »

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಬೈಕ್ ಪಲ್ಟಿ; ಸವಾರ ಸಾವು

ಸಮಗ್ರ ನ್ಯೂಸ್ : ಬೈಕ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ರಾತ್ರಿ ಮುಂಡಾಜೆ ಗ್ರಾಮದ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೀಪ ಬಳಿ ಸಂಭವಿಸಿದೆ. ಮೃತ ವ್ಯಕ್ತಿ ಅಣಿಯೂರು ನಿವಾಸಿಯಾಗಿರುವ ಪ್ರದೀಪ್ ಗೌಡ(22) ಎಂದು ಗುರುತಿಸಲಾಗಿದೆ. ಇವರು ರಾತ್ರಿಯ ವೇಳೆ ತಮ್ಮ ಸಂಬಂಧಿಕರಲ್ಲಿಗೆ ಹೋಗುತ್ತಿದ್ದಾಗ ಇವರೇ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಹೊರಗೆ ಚಲಿಸಿ ಮನೆಯೊಂದರ ಗೇಟಿಗೆ ಡಿಕ್ಕಿ ಹೊಡೆದಿದೆ . ಅಪಘಾತದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಬೈಕ್ ಪಲ್ಟಿ; ಸವಾರ ಸಾವು Read More »

ಬೆಳ್ತಂಗಡಿ: ರಿಕ್ಷಾ-ಬೈಕ್ ಡಿಕ್ಕಿ; ಯುವಕ ಮೃತ್ಯು

ಸಮಗ್ರ ನ್ಯೂಸ್: ರಿಕ್ಷಾ ಹಾಗೂ ಬೈಕ್ ನಡುವೆ ಡಿಕ್ಕಿ‌ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ಮಡಂತ್ಯಾರ್ ಸಮೀಪದ ಪಾರೆಂಕಿ ರಸ್ತೆಯಲ್ಲಿ ಸಂಭವಿಸಿದೆ. ಮಡಂತ್ಯಾರ್ ಸೆಕ್ರೆಟ್ ಹಾರ್ಟ್ ಕಾಲೇಜಿನ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಪಾರೆಂಕಿಯ ಶಿವಪ್ರಸಾದ್ ಮೃತಪಟ್ಟವರು. ಇವರು ಕಾಲೇಜಿನಿಂದ ಸಂಜೆ ಮನೆಗೆ ತೆರಳುತ್ತಿದ್ದಾಗ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಧ್ಯರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪುಂಜಾಲಕಟ್ಟೆ

ಬೆಳ್ತಂಗಡಿ: ರಿಕ್ಷಾ-ಬೈಕ್ ಡಿಕ್ಕಿ; ಯುವಕ ಮೃತ್ಯು Read More »

‘ಮುಸ್ಲಿಮರನ್ನೆಲ್ಲಾ ಕೊಂದು ಹಿಂದೂ ರಾಷ್ಟ್ರ ಮಾಡಿ’ | ವ್ಯಾಪಾರ ಬಹಿಷ್ಕಾರದ ಬೆನ್ನಲ್ಲೇ ಮುಸ್ಲಿಂ ಮುಖಂಡನಿಂದ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್​ ಶುರುವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಟಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕರಿಸುವ ಕೂಗು ಕೇಳಿಬಂದಿದೆ. ಆದರೆ, ಈ ಬಹಿಷ್ಕಾರದ ವಿರುದ್ಧ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಅವರು ಆಕ್ರೋಶ ಹೊರಹಾಕಿದ್ದಾರೆ. ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಖಾಲಿದ್​, ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದರೆ ಯಾವೊಬ್ಬ ಮುಸ್ಲಿಮರು ಕೂಡ ಅವರ ಪರವಾಗಿ ನಿಲ್ಲುವುದಿಲ್ಲ. ಆದರೆ, ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲೋದನ್ನು ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12

‘ಮುಸ್ಲಿಮರನ್ನೆಲ್ಲಾ ಕೊಂದು ಹಿಂದೂ ರಾಷ್ಟ್ರ ಮಾಡಿ’ | ವ್ಯಾಪಾರ ಬಹಿಷ್ಕಾರದ ಬೆನ್ನಲ್ಲೇ ಮುಸ್ಲಿಂ ಮುಖಂಡನಿಂದ ಆಕ್ರೋಶ Read More »