November 2022

ಫಾಲ್ಸ್ ನಲ್ಲಿ ಜಾರಿಬಿದ್ದು ನಾಲ್ಕು ಯುವತಿಯರು ಸಾವು| ಪ್ರಾಣಕ್ಕೆ ಮುಳುವಾದ ಸೆಲ್ಫಿ ಕ್ರೇಝ್

ಸಮಗ್ರ ನ್ಯೂಸ್: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಭಾರೀ ದುರಂತ ಸಂಭವಿಸಿದೆ. ಕಾಲು ಜಾರಿ ಬಿದ್ದು ರಾಜ್ಯದ ನಾಲ್ವರು ಯುವತಿಯರು ಸಾವನ್ನಪ್ಪಿದ್ದಾರೆ. ಜಲಪಾತ ವೀಕ್ಷಿಸಲು ಬೆಳಗಾವಿಯಿಂದ 40 ಯುವತಿಯರು ತೆರಳಿದ್ದರು. ಅಲ್ಲಿ ಸೆಲ್ಪಿ ತೆಗೆದುಕೊಳ್ಳುವ ವೇಳೆ ಐವರು ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ. ಇವರಲ್ಲಿ ನಾಲ್ವರು ಮೃತಪಟ್ಟರೆ, ಓರ್ವಳ ಸ್ಥಿತಿ ಗಂಭೀರವಾಗಿದೆ. ಉಜ್ವಲ್ ನಗರದ ಆಸಿಯಾ ಮುಜಾವರ್, ಕುದ್ರಶಿಯಾ, ರುಕ್ಕಶಾರ್ ಭಿಸ್ತಿ, ತಸ್ಮಿಯಾ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಎಲ್ಲ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇವರನ್ನು […]

ಫಾಲ್ಸ್ ನಲ್ಲಿ ಜಾರಿಬಿದ್ದು ನಾಲ್ಕು ಯುವತಿಯರು ಸಾವು| ಪ್ರಾಣಕ್ಕೆ ಮುಳುವಾದ ಸೆಲ್ಫಿ ಕ್ರೇಝ್ Read More »

ಮಂಗಳೂರು: ಬಾಂಬ್ ಸ್ಫೋಟ ಪ್ರಕರಣ|ಶಂಕಿತನಿಗೆ ಒಬ್ಬಳು ಗರ್ಲ್​ಫ್ರೆಂಡ್

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ರೂವಾರಿ ಶಾರೀಕ್ ಗೆ ಒಬ್ಬಳು ಗರ್ಲ್​ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದ್ದು ಇದೀಗ ಅಕೆಯನ್ನು ತನಿಖಾ ದಳ ವಿಚಾರಣೆ ನಡೆಸಿರುವುದಾಗಿ ತಿಳಿದಬಂದಿದೆ. ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತ ಹೇಳಿಕೆ ನೀಡದ ಸ್ಥಿತಿಯಲ್ಲಿದ್ದಾನೆ. ಒಂದು ವಾರದ ಬಳಿಕ ಆತನಿಂದ ಹೇಳಿಕೆ ಪಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಪೊಲೀಸರು ಮತ್ತು ಎನ್​ಐಎ ತಂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಾರೀಕ್

ಮಂಗಳೂರು: ಬಾಂಬ್ ಸ್ಫೋಟ ಪ್ರಕರಣ|ಶಂಕಿತನಿಗೆ ಒಬ್ಬಳು ಗರ್ಲ್​ಫ್ರೆಂಡ್ Read More »

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಹಾವೊಂದು ಚಪ್ಪಲಿ ಕಚ್ಚಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ಹಾವಿನ ಈ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ಹಾವು ಆ ಚಪ್ಪಲಿಯನ್ನು ಏನು ಮಾಡುತ್ತದೆ. ಅದಕ್ಕೆ ಕಾಲುಗಳಿಲ್ಲವಲ್ಲ ಎಂದು ಶೀರ್ಷಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಯಿಯಲ್ಲಿ ಚಪ್ಪಲಿ‌ ಕಚ್ಚಿಕೊಂಡ ಹಾವು ವೇಗವಾಗಿ ಸರಿದು ಹೋಗುತ್ತದೆ. ಈ ವೀಡಿಯೊ ಬಿಹಾರದ್ದೆಂದು ಹಲವರು ಗಮನ ಸೆಳೆದಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅನೇಕರು ರೋಚಕ‌ ಕಾಮೆಂಟ್ ಮಾಡಿದ್ದಾರೆ.

ಚಪ್ಪಲಿ ಕಚ್ಚಿಕೊಂಡು ಹೋದ ಹಾವು| ವಿಡಿಯೋ ವೈರಲ್ Read More »

ಸುಳ್ಯ: ಪತ್ನಿಯನ್ನು ಕೊಂದು ಪರಾರಿಯಾದವ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪತಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪಶ್ಚಿಮ ಬಂಗಾಲದ ಪೊಲೀಸರ ಸಹಾಯದಿಂದ ಸುಳ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ಹೇಳ ಲಾಗಿದೆ. ಈತ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ ತೆರಳಿದ್ದ. ಈ

ಸುಳ್ಯ: ಪತ್ನಿಯನ್ನು ಕೊಂದು ಪರಾರಿಯಾದವ ಪೊಲೀಸ್ ವಶಕ್ಕೆ Read More »

ಪುತ್ತೂರು: ಮನೆ ಮುಂದೆ ಮಹಿಳೆಯ ಸುಟ್ಟ ದೇಹ ಪತ್ತೆ

ಸಮಗ್ರ ನ್ಯೂಸ್: ಮಹಿಳೆಯೋರ್ವರ ದೇಹಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನ.26ರ ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಬೀಸ ಎಂದು ಗುರುತಿಸಲಾಗಿದೆ. ನಬೀಸ ಎಂದಿನಂತೆ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಮುಂಬಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಬೀಸ ಅವರೇ ಬೆಂಕಿ ಹಚ್ಚಿಕೊಂಡರೇ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಬೀಸ ಅವರು ಅಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು

ಪುತ್ತೂರು: ಮನೆ ಮುಂದೆ ಮಹಿಳೆಯ ಸುಟ್ಟ ದೇಹ ಪತ್ತೆ Read More »

ವಿವಾಹಿತ ಮಹಿಳೆಯ ಜೊತೆ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್

ಸಮಗ್ರ ನ್ಯೂಸ್: ಅವಳು ವಿವಾಹಿತ ಮಹಿಳೆಯಾಗಿದ್ದು, ಅರ್ಜಿದಾರರೊಂದಿಗೆ ಕಾನೂನುಬದ್ಧ ವಿವಾಹ ಸಾಧ್ಯವಿಲ್ಲ ಎಂದು ಆಕೆಗೆ ತಿಳಿದು ಇನ್ನೊಬ್ಬನಿಂದ ಸಮ್ಮತಿ ಸರಸ ನಡೆಸಿದರೆ ಅದನ್ನು ಅನೈತಿಕ ಸಂಬಂಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಕೇರಳ ಹೈಕೋರ್ಟ್ ಇತ್ತೀಚೆಗೆ 25 ವರ್ಷದ ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಾಗ ಈಗಾಗಲೇ ವಿವಾಹಿತೆಯಾಗಿರುವ ಮಹಿಳೆಯನ್ನು ಮದುವೆಯಾಗುವುದಾಗಿ ಪುರುಷ ಭರವಸೆ ನೀಡಿ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದರೆ ಅದು ಭಾರತೀಯ ದಂಡ ಸಂಹಿತೆಯ ( IPC ) ಸೆಕ್ಷನ್

ವಿವಾಹಿತ ಮಹಿಳೆಯ ಜೊತೆ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ Read More »

ತೀವ್ರ ವಿರೋಧದ ಹಿನ್ನೆಲೆ| ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ನೇಮ ರದ್ದು

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ ಆಚರಣೆ ಮಾಡಲು ನಿರ್ಧರಿಸಲಾಗಿದ್ದ‌ ಕೊರಗಜ್ಜ ನೇಮಕ್ಕೆ ತುಳುನಾಡಿನ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಮೋತ್ಸವವನ್ನು ರದ್ದುಪಡಿಸಲಾಗಿದೆ. ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು

ತೀವ್ರ ವಿರೋಧದ ಹಿನ್ನೆಲೆ| ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ನೇಮ ರದ್ದು Read More »

ಅಡಿಕೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ| ಮತ್ತಷ್ಟು ಬೆಲೆ ಇಳಿಕೆ ಭೀತಿ

ಸಮಗ್ರ ನ್ಯೂಸ್: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಶನಿವಾರ ದೊಡ್ಡ ಮಟ್ಟದ ಕುಸಿತ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿಯುತ್ತ ಸಾಗಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಬೆಲೆ ಇಳಿಕೆಯಾಗಿದೆ. ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆ ಅಡಿಕೆ ದರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ

ಅಡಿಕೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ| ಮತ್ತಷ್ಟು ಬೆಲೆ ಇಳಿಕೆ ಭೀತಿ Read More »

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ

ಸಮಗ್ರ ನ್ಯೂಸ್: ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಹಳಷ್ಟು ಕಂಪನಿಗಳು ನಷ್ಟ ತೋರಿಸಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ 4 ಸಾವಿರಕ್ಕೂ ಹೆಚ್ಚು ಕಂಪನಿಗಳ ಪೈಕಿ ಸುಮಾರು 1,100ಕ್ಕೂ ಹೆಚ್ಚು ಕಂಪನಿಗಳು ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ನಷ್ಟ ಕಂಡಿವೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಬರೋಬ್ಬರಿ 7,562.8 ಕೋಟಿ ರೂ ನಷ್ಟ ಹೊಂದಿರುವುದು ಅದರ ವರದಿಯಿಂದ ತಿಳಿದುಬರುತ್ತದೆ. ಈ ಕ್ವಾರ್ಟರ್‌ನಲ್ಲಿ ಅತಿಹೆಚ್ಚು ನಷ್ಟ ಹೊಂದಿದ ಕಂಪನಿ ಎಂಬ ಮುಜುಗರದ ದಾಖಲೆ ವೊಡಾಫೋನ್‌ಗೆ

ಪೇಟಿಎಂ ಜೊತೆಗೆ 10 ದೈತ್ಯ ಕಂಪೆನಿಗಳೂ ಹಳ್ಳಕ್ಕೆ!! ಷೇರು ಮಾರುಕಟ್ಟೆಯಲ್ಲಿ ಕೋಲಾಹಲ Read More »

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಬ್ಯಾನ್? ಹೀಗೊಂದು ವೈರಲ್ ಸುದ್ದಿ

ಸಮಗ್ರ ನ್ಯೂಸ್: ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ಕರುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡನಾಡಿನಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಹ್ಯಾಷ್‌ ಟ್ಯಾಗ್‌ಗಳು ಕೂಡಾ ಟ್ರೇಡಿಂಗ್ ಆಗುತ್ತಿವೆ. ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬ್ಯುಸಿಯಾಗಿದ್ದಾರೆ. ಈ ನಡುವೆ ಕರುನಾಡಿನ ಸಿನಿ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ, ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್‌

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಬ್ಯಾನ್? ಹೀಗೊಂದು ವೈರಲ್ ಸುದ್ದಿ Read More »