November 2022

ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ

ಸಮಗ್ರ ನ್ಯೂಸ್: ಇಲ್ಲಿ ಪೊದೆಯೊಳಗೆ ಬಸ್ ತಂಗುದಾಣವೊಂದು ಅಡಗಿ‌ ಕುಳಿತಿದೆ. ಇದು ಕಂಡು ಬಂದಿರುವುದು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪೆರಿಗೇರಿ, ಕನ್ನಾಯ ಎಂಬಲ್ಲಿ. ಹೌದು, ಇಲ್ಲಿಯ ಪ್ರಯಾಣಿಕರು ಬಸ್ ತಂಗುದಾಣ ಇದ್ದರೂ ಕೂಡ ರಸ್ತೆ ಬದಿ ನಿಲ್ಲುವಂತಾಗಿದೆ. ಇದಕ್ಕೆ ಕಾರಣ ಅಲ್ಲಿಯ ಬಸ್ ನಿಲ್ದಾಣ ಇರುವುದು ಪೊದೆಯೊಳಗೆ. ಈ ಬಗ್ಗೆ ಇಲ್ಲಿ ಯಾರು ಹೇಳೊರಿಲ್ಲ! ಕೇಳೊರಿಲ್ಲ! ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ರಸ್ತೆ ಬದಿ ನಿಲ್ಲುವಂತಾಗಿದೆ. ಮಧ್ಯಾಹ್ನದ ಬಿಸಿಲಿಗೆ ಬಸ್ ಗಾಗಿ ಕಾದು […]

ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ Read More »

ಮತ್ತೆ ಚುರುಕಾದ ಹಿಂಗಾರು| ರಾಜ್ಯದ ಒಳನಾಡು, ಕರಾವಳಿಯಲ್ಲಿ ಮಳೆ ಸಾಧ್ಯತೆ| 8 ಜಿಲ್ಲೆಗಳಿಗೆ ಹಳದಿ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಕರ್ನಾಟಕದ ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಶನಿವಾರ) ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹಳದಿ

ಮತ್ತೆ ಚುರುಕಾದ ಹಿಂಗಾರು| ರಾಜ್ಯದ ಒಳನಾಡು, ಕರಾವಳಿಯಲ್ಲಿ ಮಳೆ ಸಾಧ್ಯತೆ| 8 ಜಿಲ್ಲೆಗಳಿಗೆ ಹಳದಿ ಅಲರ್ಟ್ Read More »

ಚಿಕ್ಕಮಗಳೂರು: ಹೊತ್ತಿ ಉರಿದ ರೇಡಿಯೇಟರ್ ಸರ್ವಿಸ್ ಅಂಗಡಿ

ಸಮಗ್ರ ನ್ಯೂಸ್: ಬೆಂಕಿ ತಗುಲಿ ರೇಡಿಯೇಟರ್ ಸರ್ವಿಸ್ ಅಂಗಡಿಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ನಡೆದಿದೆ. ಇದು ಲುಕ್ಮನ್ ಎಂಬುವರಿಗೆ ಸೇರಿದ ಅಂಗಡಿಯಾಗಿದೆ. ಇವರು ರೇಡಿಯೇಟರ್ ಸರ್ವಿಸ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಚಿಕ್ಕಮಗಳೂರು: ಹೊತ್ತಿ ಉರಿದ ರೇಡಿಯೇಟರ್ ಸರ್ವಿಸ್ ಅಂಗಡಿ Read More »

ಕೊಟ್ಟಿಗೆಹಾರ: ಹಕ್ಕುಪತ್ರಕ್ಕಾಗಿ ಬಡಕುಟುಂಬದ ಅಲೆದಾಟ|ತಿಂಗಳ ಹಿಂದೆ ಆತ್ಮಹತ್ಯೆಗೂ ಯತ್ನ| ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ

ಸಮಗ್ರ ನ್ಯೂಸ್: ಹೊಸಹಳ್ಳಿ ಗ್ರಾಮದ ಬಡಕುಟುಂಬವೊಂದು ಹಕ್ಕುಪತ್ರಕ್ಕಾಗಿ ಅಲೆದಾಡಿ ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಘಟಣೆಯೂ ನಡೆದಿದೆ. ಬಿ ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪ್ರಸನ್ನ ಎಂಬುವವರ ಕುಟುಂಬವು ಗುಡಿಸಿಲಿನಲ್ಲಿ ವಾಸ ಮಾಡಿಕೊಂಡಿದ್ದು ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಸರ್ವೆ ನಂ. 38 ರಲ್ಲಿ ಆಶ್ರಯ ನಿವೇಶನಕ್ಕಾಗಿ ಮೀಸಲಿಟ್ಟ ಜಾಗದಲ್ಲಿರುವ ನಿವೇಶನದ ಹಕ್ಕುಪತ್ರ ಬಿ ಹೊಸಹಳ್ಳಿ ಗ್ರಾ.ಪಂಯಲ್ಲಿ 2019 ರಿಂದ ಇದ್ದರೂ ಕೂಡ ಹಕ್ಕುಪತ್ರ ನೀಡುತ್ತಿಲ್ಲ ಎಂಬುದು ಪ್ರಸನ್ನ ಅವರ ಆರೋಪ. 2022ರ ಸೆಪ್ಟೆಂಬರ್ 6

ಕೊಟ್ಟಿಗೆಹಾರ: ಹಕ್ಕುಪತ್ರಕ್ಕಾಗಿ ಬಡಕುಟುಂಬದ ಅಲೆದಾಟ|ತಿಂಗಳ ಹಿಂದೆ ಆತ್ಮಹತ್ಯೆಗೂ ಯತ್ನ| ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ Read More »

ನಾಡಪ್ರಭುವನ್ನು ರಾಜಕೀಯಕ್ಕೆ ಎಳೆತಂದ ಬಿಜೆಪಿ| ಮಾಜಿ ಪ್ರಧಾನಿಗೂ ಆಹ್ವಾನ ನೀಡದ ರಾಜ್ಯಸರ್ಕಾರ

ಸಮಗ್ರ ನ್ಯೂಸ್: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕಾರಣ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ. ಒಕ್ಕಲಿಗ ಸಮುದಾಯದ ಪ್ರಮುಖ ನೇತಾರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸಮಾರಂಭಕ್ಕೆ ಆಹ್ವಾನಿಸದೇ ಇರುವ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಜೆಡಿಎಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು, ಬಿಜೆಪಿ ಸರಕಾರ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದೆ. ಅಲ್ಲದೆ, ಕೆಂಪೇಗೌಡರನ್ನು ಸ್ವತಃ ಪ್ರಧಾನಿ ನರೇಂದ್ರ

ನಾಡಪ್ರಭುವನ್ನು ರಾಜಕೀಯಕ್ಕೆ ಎಳೆತಂದ ಬಿಜೆಪಿ| ಮಾಜಿ ಪ್ರಧಾನಿಗೂ ಆಹ್ವಾನ ನೀಡದ ರಾಜ್ಯಸರ್ಕಾರ Read More »

ಚಿಕ್ಕಮಗಳೂರು: ಕನಕ ಜಯಂತಿ ಕಾರ್ಯಕ್ರಮ|ಮಾಜಿ ಶಾಸಕ ಶ್ರೀನಿವಾಸ್ ಭಾಗಿಯಾಗದಂತೆ ಜನರಿಂದ ಧಿಕ್ಕಾರ.

ಸಮಗ್ರ ನ್ಯೂಸ್: ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನ ಕಮಿಟಿಯ ಹಣ ದುರುಪಯೋಗ ಆರೋಪದ ಹಿನ್ನಲೆ ತರೀಕೆರೆ ಪಟ್ಟಣದಲ್ಲಿ ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಶಾಸಕ ಶ್ರೀನಿವಾಸ್ ಅವರಿಗೆ ಘೇರಾವ್ ಹಾಕಿದ ಘಟನೆ ಶುಕ್ರವಾರ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತರೀಕೆರೆ ಮಾಜಿ ಶಾಸಕನಿಗೆ ಜನರಿಂದ ಧಿಕ್ಕಾರ ಹಾಕಿದ್ದಾರೆ. ರೇವಣಸಿದ್ದೇಶ್ವರ ಕುರುಬ ಸಮಾಜದ ಮುಖಂಡರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ಆಕ್ರೋಶ ಹೊರ ಹಾಕಿದ್ದಾರೆ. ಶ್ರೀನಿವಾಸ್ ಅವರನ್ನ ಲೆಕ್ಕಿಸದೇ ಕಾರ್ಯಕ್ರಮ ಮುಂದುವರೆಸಿರುವ ಬಗ್ಗೆ

ಚಿಕ್ಕಮಗಳೂರು: ಕನಕ ಜಯಂತಿ ಕಾರ್ಯಕ್ರಮ|ಮಾಜಿ ಶಾಸಕ ಶ್ರೀನಿವಾಸ್ ಭಾಗಿಯಾಗದಂತೆ ಜನರಿಂದ ಧಿಕ್ಕಾರ. Read More »

ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಸಾವನ್ನಪ್ಪಿದ ಹಿಂದಿ ಕಿರುತೆರೆ ನಟ ಸಿದ್ದಾರ್ಥ್

ಸಮಗ್ರ ನ್ಯೂಸ್: ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ನಟ ಮತ್ತು ‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ಸಿದ್ಧಾಂತ್ ಸೂರ್ಯವಂಶಿ ಅವರು ಶುಕ್ರವಾರ ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ಧಾರೆ ಎಂದು ತಿಳಿದುಬಂದಿದೆ. ಅವರು ಪತ್ನಿ ಮತ್ತು ಅವರ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಿದ್ಧಾಂತ್ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ನಿಂದ ಸಿದ್ಧಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.

ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಸಾವನ್ನಪ್ಪಿದ ಹಿಂದಿ ಕಿರುತೆರೆ ನಟ ಸಿದ್ದಾರ್ಥ್ Read More »

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ| ನಳಿನಿ, ಆರ್.ಪಿ ರವಿಚಂದ್ರನ್ ಸೇರಿ 6 ಮಂದಿಗೆ ಬಿಡುಗಡೆ ಭಾಗ್ಯ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಮತ್ತು ಆರ್.ಪಿ.ರವಿಚಂದ್ರನ್ ಸೇರಿದಂತೆ ಆರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಮತ್ತು ಆರ್.ಪಿ.ರವಿಚಂದ್ರನ್ ಸೇರಿದಂತೆ ಆರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಇಂದು ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಕೊಲೆಗಡುಕರು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಅಕಾಲಿಕ ಬಿಡುಗಡೆ ಕೋರಿ ನಳಿನಿ ಸಲ್ಲಿಸಿದ್ದ

ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ| ನಳಿನಿ, ಆರ್.ಪಿ ರವಿಚಂದ್ರನ್ ಸೇರಿ 6 ಮಂದಿಗೆ ಬಿಡುಗಡೆ ಭಾಗ್ಯ Read More »

ಮೂಡಬಿದರೆ:ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ವಿಕೃತಕಾಮಿ ವೃದ್ಧ ಜೈಲಿಗೆ/ವೃದ್ಧ ಶ್ರೀಧರ ಪುರಾಣಿಕನ ಕಾಮವಾಂಛೆಗೆ ಬಲಿಯಾದಳು ಮೂಡಬಿದ್ರೆ ಜೈನ್ ಕಾಲೇಜ್ ವಿದ್ಯಾರ್ಥಿನಿ!

ಸಮಗ್ರ ನ್ಯೂಸ್: ಬುಧವಾರ ಮೂಡಬಿದರೆಯ ಜೈನ್ ಪಿಯು ಕಾಲೇಜಿನ ಪ್ರಥಮ ಪಿಯು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ. ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಕೋಟೆಬಾಗಿಲು ನಿವಾಸಿ ಶ್ರೀಧರ ಪುರಾಣಿಕ್(63) ಎಂಬ ವೃದ್ಧನನ್ನು ಮೂಡಬಿದ್ರೆ ಪೊಲೀಸರು ಪೋಕ್ಸೋ, ದಲಿತ ದೌರ್ಜನ್ಯ ಮತ್ತಿತರ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ಹಿನ್ನೆಲೆ:17ರ ಹರೆಯದ ಬಾಲಕಿ ಕಾರ್ಕಳ ಬೈಲೂರು ನಿವಾಸಿಯಾಗಿದ್ದು ಪಡುಕೊಣಾಜೆ ಹೌದಾಲ್ ಗ್ರಾಮದಲ್ಲಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು ಕಾಲೇಜಿಗೆ ಹೋಗಿ ಬರುತ್ತಿದ್ದಳು. ಮಂಗಳವಾರ ಬಾಲಕಿಗೆ ಕಿವಿ ನೋವು

ಮೂಡಬಿದರೆ:ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ವಿಕೃತಕಾಮಿ ವೃದ್ಧ ಜೈಲಿಗೆ/ವೃದ್ಧ ಶ್ರೀಧರ ಪುರಾಣಿಕನ ಕಾಮವಾಂಛೆಗೆ ಬಲಿಯಾದಳು ಮೂಡಬಿದ್ರೆ ಜೈನ್ ಕಾಲೇಜ್ ವಿದ್ಯಾರ್ಥಿನಿ! Read More »

ಮುದ್ದು ಮೂಡುಬೆಳ್ಳೆಗೆ ರಂಗಚಾವಡಿ ಪ್ರಶಸ್ತಿಯ ಗರಿ

ಸಮಗ್ರ ನ್ಯೂಸ್: ಈ ಬಾರಿಯ ಪ್ರತಿಷ್ಠಿತ ರಂಗ ಚಾವಡಿ 2022 ಪ್ರಶಸ್ತಿಗೆ ಸಾಹಿತಿ ಜಾನಪದ ವಿದ್ವಾಂಸರಾದ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನ. 20 ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಮುದ್ದು ಮೂಡುಬೆಳ್ಳೆ ಅವರು ಬಹುಮುಖ ಪ್ರತಿಭಾವಂತರು ಹಾಗೂ ಬೇರೆ ಬೇರೆ ರಂಗಗಳಲ್ಲಿ ಸೇವೆ ಸಲ್ಲಿಸಿ ಗಮನ ಸೆಳೆದವರು ಹಾಗೂ ಸೆಳೆಯುತ್ತಿರುವವರು. ಸುಮಾರು 16ರ ಪ್ರಾಯದಿಂದಲೇ ಕೆಲಸ ಮತ್ತು ಶಿಕ್ಷಣ – ಜೊತೆಗೆ ನಡೆದು ಬಂತು. ತುಳು ನಾಡು,

ಮುದ್ದು ಮೂಡುಬೆಳ್ಳೆಗೆ ರಂಗಚಾವಡಿ ಪ್ರಶಸ್ತಿಯ ಗರಿ Read More »