Ad Widget .

‘ಸದ್ದು- ವಿಚಾರಣೆ ನಡೆಯುತ್ತಿದೆ’| ಕಾಂತಾರ ಬಳಿಕ ಮತ್ತೊಂದು ಕನ್ನಡ ಸಿನಿಮಾಕ್ಕೆ ಸಿಕ್ತು ಉತ್ತಮ ರೇಟಿಂಗ್

ಸಮಗ್ರ ನ್ಯೂಸ್: ರಿಲೀಸ್​ ಆಗುವ ಪ್ರತಿ ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲೋದು ಕಷ್ಟ. ಆದರೆ ಕಂಟೆಂಟ್​ ಇದ್ದರೆ ಎಂತಹದ್ದೇ ಚಿತ್ರವಾದ್ರೂ ಸದ್ದು ಮಾಡುತ್ತೆ. ಸದ್ಯ ‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದ್ದು, ಒಳ್ಳೆಯ ಕಥೆ, ಚಿತ್ರಕಥೆ, ಪಾತ್ರಗಳು ಹಾಗೂ ಮೇಕಿಂಗ್​ನಿಂದ ಎಲ್ಲರ ಗಮನ ಸೆಳೆದಿದೆ. ಕಾಂತಾರ ಬಳಿಕ ಕನ್ನಡದ ಈ ಸಿನಿಮಾ, IMDbಯಲ್ಲಿ 9.8 ರೇಟಿಂಗ್ ಪಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರತಿಷ್ಠಿತ IMDb ಸಿಕ್ಕ ಸಿಕ್ಕವ್ರಿಗೆಲ್ಲಾ ಹೀಗೆ ರೇಟಿಂಗ್ ಕೊಡುವ ವೆಬ್​ಸೈಟ್ ಅಲ್ಲ. ತುಂಬಾ ಕ್ಲಿಯರ್ ಆಗಿ ರಿವ್ಯೂ ಮಾಡೋ ವೆಬ್​ಸೈಟ್ ಹೀಗೆ ಟಾಪ್​ ರೇಟಿಂಗ್ ನೀಡಿ, ಸಿನಿಮಾವನ್ನು ಉತ್ತೇಜಿಸಿರೋದು ಖುಷಿಯ ವಿಚಾರ. ಭಾಸ್ಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಪೊಲೀಸ್ ಆಫೀಸರ್​ಗಳ ಏಳು ಬೀಳಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

Ad Widget . Ad Widget . Ad Widget .

ಲೀಡ್​ನಲ್ಲಿ ರಾಕೇಶ್ ಮಯ್ಯ ಹಾಗೂ ಪಾವನಾ ಗೌಡ ಬಣ್ಣ ಹಚ್ಚಿದ್ದು, ಇವರೊಟ್ಟಿಗೆ ಬಹುಮುಖ್ಯ ಪಾತ್ರಕ್ಕೆ ಮಧು ನಂದನ್ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಮಧು ನಂದನ್ ವೃತ್ತಿಯಲ್ಲಿ ವೆಟರ್ನರಿ ಕಾಲೇಜ್ ಲೆಕ್ಚರರ್. ಆದ್ರೆ ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿರೋ ಇವ್ರು, ಈ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾನ ಪ್ರೇಕ್ಷಕರಿಗೆ ಉಣಬಡಿಸೋ ಮಹತ್ವದ ಕಾರ್ಯಕ್ಕೆ ಕೈಹಾಕಿ, ನಟಿಸುವ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ.

ನಟ, ನಿರ್ದೇಶಕರಾಗಿ ತನ್ನದೇ ಆದ ಛಾಪು ಮೂಡಿಸಿರೋ ಆ್ಯಕ್ಟ್ 1978 ಚಿತ್ರದ ರಘು ಶಿವಮೊಗ್ಗ ಮೊದಲ ಬಾರಿಗೆ ನೆಗೆಟೀವ್ ರೋಲ್​ನಲ್ಲಿ ಕಾಣಸಿಗಲಿದ್ದಾರೆ. ಅಚ್ಯುತ್ ಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದು, ಟ್ವಿಸ್ಟ್ ಅಂಡ್ ಟರ್ನ್ಸ್​ನಿಂದ ಸಿನಿಮಾ ನೋಡುಗರಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.

ಹೊಸಬರ ಈ ರೀತಿಯ ವಿನೂತನ ಪ್ರಯತ್ನಗಳು ಸದಾ ಗೆಲ್ಲಬೇಕು. ಯಾವುದೇ ಬ್ಯಾಗ್ರೌಂಡ್ ಅಥ್ವಾ ಗಾಡ್​ಫಾದರ್ ಇಲ್ಲದೆ ಹೀಗೆ ಸಿನಿಮಾ ಮಾಡೋ ಮಹದಾಸೆ ಹೊತ್ತು ಬರೋ ಸಿನಿಮೋತ್ಸಾಹಿ ತಂಡವನ್ನ ಕನ್ನಡಿಗರು ಕೈಹಿಡಿಯಬೇಕಿದೆ. ಕೆಆರ್​ಜಿ ಅಂತಹ ಬಿಗ್ ಬ್ಯಾನರ್ ಈ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಸಿನಿಮಾ ನೋಡಿದ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಬರಹಗಳಿಂದ ಅವ್ರ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾರೆ.

ಇಷ್ಟ ಪಟ್ಟು ಸಿನಿಮಾ ಮಾಡಿರೋ ಮಧು ನಂದನ್ ತಂಡಕ್ಕೆ ಇದೀಗ ಸದ್ದು ವಿಚಾರಣೆ ನಡೆಯುತ್ತಿದೆ ಚಿತ್ರವನ್ನು ಥಿಯೇಟರ್​ನಲ್ಲಿ ಉಳಿಸಿಕೊಳ್ಳೋದು ತುಂಬಾ ಕಷ್ಟವಾಗ್ತಿದೆ. ಕನ್ನಡಿಗರು ಒಳ್ಳೆಯ ಪ್ರಯತ್ನಗಳನ್ನ ಕೈಬಿಟ್ಟಿಲ್ಲ ಎನ್ನುವುದಕ್ಕೆ ಈ ಚಿತ್ರ ಮತ್ತೊಂದು ಸಾಕ್ಷಿಯಾಗಿದೆ.

Leave a Comment

Your email address will not be published. Required fields are marked *