Ad Widget .

“ವಿದ್ಯಾರ್ಥಿಗಳೇ, ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಳ್ಳದಿರಿ”
-ಇನಾಯತ್ ಅಲಿ |ಸುರತ್ಕಲ್ ನಲ್ಲಿ ಎನ್ ಎಸ್ ಯು ಐ ನಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ

ಸುರತ್ಕಲ್: ಎನ್ ಎಸ್ ಯು ಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ಸಂಜೆ ಇಲ್ಲಿನ ವಿಶ್ವ ಬ್ರಾಹ್ಮಣ ಸಭಾಭವನದಲ್ಲಿ ಜರುಗಿತು.

Ad Widget . Ad Widget .

ಈ ವೇಳೆ ಮಾತಾಡಿದ ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಇನಾಯತ್ ಅಲಿ ಅವರು, “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
ಅದರಂತೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿರುವಎನ್ ಎಸ್ ಯು ಐ ಸುರತ್ಕಲ್ ಬ್ಲಾಕ್ ಸಮಿತಿಯ ನಡೆ ಶ್ಲಾಘನೀಯ.

Ad Widget . Ad Widget .

ಇದನ್ನು ವಿಧ್ಯಾರ್ಥಿಗಳು ಸ್ಪೂರ್ತಿಯಾಗಿ ಪಡೆದುಕೊಂಡು ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಬೇಕು. ವಿದ್ಯಾರ್ಥಿ ಶಕ್ತಿ ದೇಶದ ಭವಿಷ್ಯ.
ಅನ್ಯಾಯವನ್ನು ಮೆಟ್ಟಿ ನಿಲ್ಲುವ ಮೂಲಕ, ನಮ್ಮ ನಡುವೆ ಅನ್ಯಾಯ, ಶೋಷಣೆ ವಿರುದ್ಧ ಮಾತಾಡುವಂತಹ, ಅದರ ವಿರುದ್ಧ ಹೋರಾಟಗಳನ್ನು ಸಂಘಟಿಸುವ ಮೂಲಕ ನಾವು ವಿಧ್ಯಾರ್ಥಿ ಶಕ್ತಿಯನ್ನು ಬಲಿಷ್ಠಗೊಳಿಸಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಬಾರದು” ಎಂದು ಶುಭ ಹಾರೈಸಿದರು.

ಬಳಿಕ ಮಾತಾಡಿದ ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು, “ವಿದ್ಯಾರ್ಥಿಗಳಿಗೆ ಸರಕಾರ ಸರಿಯಾದ ರೀತಿಯಲ್ಲಿ ನೆರವು ನೀಡುತ್ತಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು” ಎಂದರು.

ವೇದಿಕೆಯಲ್ಲಿ ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಹಿದೀನ್ ಬಾವ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಮಾಜಿ ಉಪ ಮೇಯರ್ ಪುರುಷೋತ್ತಮ್ ಚಿತ್ರಾಪುರ, ಬಶೀರ್ ಬೈಕಂಪಾಡಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಬಿ.ಕೆ ತಾರನಾಥ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಖ್ ಬಾಯಬೆ, ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಅನ್ವೀತ್ ಕಟೀಲ್, ಭರತ್ ರಾಮ್ ಗೌಡ, ಎನ್ ಎಸ್ ಯು ಐ ಸುರತ್ಕಲ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಮಾನ್ ಪೂಜಾರಿ, ಮುಖಂಡರಾದ ಸದಾಶಿವ ಶೆಟ್ಟಿ, ಎನ್ ಎಸ್ ಯು ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಹ್ಶಿರ್ ಉಪಸ್ಥಿತರಿದ್ದರು.

ರೆಹಮಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ ಸುಹಾನ್ ಆಳ್ವ ವಂದಿಸಿದರು.

Leave a Comment

Your email address will not be published. Required fields are marked *