Ad Widget .

ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಬಿಜೆಪಿ ಅಭ್ಯರ್ಥಿ!?

ಮಂಗಳೂರು: ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಅಭ್ಯರ್ಥಿಗಳನ್ನು ಬದಲಿಸಲಿದ್ದು, ಆ ಪೈಕಿ ಕಾಪು ಕ್ಷೇತ್ರ ಕೂಡ ಒಂದು ಎಂದು ತಿಳಿದು ಬಂದಿದೆ.

Ad Widget . Ad Widget .

ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವಾರು ಪ್ರಮುಖ ಮುಖಂಡರು ಪ್ರಯತ್ನಿಸುತ್ತಿದ್ದು, ಆ ಪೈಕಿ ಹಿರಿಯ ನಾಯಕ ಸುರೇಶ್ ಶೆಟ್ಟಿ ಗುರ್ಮೆ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇವರ ಹೆಸರು ಕಳೆದ ಬಾರಿಯೇ ಕೇಳಿ ಬಂದಿದ್ದು, ಕೊನೆ ಕ್ಷಣಕ್ಕೆ ಬದಲಾದ ಬೆಳವಣಿಗೆಯಲ್ಲಿ ಹಿಂದಿನ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೇ ಟಿಕೆಟ್ ನೀಡಲಾಗಿತ್ತು.

Ad Widget . Ad Widget .
ಸುರೇಶ್ ಶೆಟ್ಟಿ  ಬಿಜೆಪಿಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿದವರು. ಕಳೆದ ಬಾರಿ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಅಭ್ಯರ್ಥಿಯ ಗೆಲುವಿಗೆ ವಿಶೇಷವಾಗಿ ಶ್ರಮಿಸಿದ್ದರು. ಆ ಬಳಿಕವೂ ಪಕ್ಷ ಸಂಘಟನೆ ಮಾಡುತ್ತಾ ಪಕ್ಷ ನಿಷ್ಠೆ ತೋರಿದವರು.

ಬೆಂಗಳೂರಿನಲ್ಲಿ ಹಿರಿಯ ನಾಯಕರ ಜತೆಗೂ ಉತ್ತಮ ಸಂಬಂಧ, ಸಂಪರ್ಕ ಬೆಳೆಸಿಕೊಂಡಿರುವ ಅವರು ಯಾವುದೇ ಕೆಲಸವನ್ನೂ ಛಲ ತೊಟ್ಟು ಮಾಡುವವರು, ಮಾಡಿಸುವವರು. ಉತ್ತಮ ವಾಗ್ಮಿಯೂ ಆಗಿರುವ ಅವರು ಜನರನ್ನು ತನ್ನ ಮಾತಿನಲ್ಲೇ ಸೆಳೆಯುವ ಶಕ್ತಿ ಹೊಂದಿದವರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾದವರು. ಮದುವೆ, ವೈದ್ಯಕೀಯ, ಶಿಕ್ಷಣ ಹೀಗೆ ಮನೆಬಾಗಿಲಿಗೆ ಸಹಾಯ ಕೇಳಿಕೊಂಡು ಬಂದವರನ್ನು ಯಾವತ್ತೂ ಅವರು ಬರಿಗೈಯಲ್ಲಿ ಹಿಂದೆ ಕಳುಹಿಸಿದವರಲ್ಲ. ಕಾರ್ಯಕರ್ತರ ಜತೆ ಹಾಗೂ ನಾಯಕರ ಜತೆಯೂ ಉತ್ತಮ ಸಂವಹನ ಮಾಡುವವರು.

ಕಾಪು ಕ್ಷೇತ್ರ ಮತ್ತೆ ಬಿಜೆಪಿ ಕೈಯಲ್ಲಿ ಉಳಿಯ ಬೇಕಾದರೆ ಗುರ್ಮೆ ಅವರಿಗೆ ಅವಕಾಶ ನೀಡಬೇಕೆನ್ನುವುದು ಸ್ಥಳೀಯ ಕಾರ್ಯಕರ್ತರ ಜನಾಭಿಪ್ರಾಯವಾಗಿದೆ. ಒಂದೊಮ್ಮೆ ಇವರಿಗೆ ಟಿಕೆಟ್ ಸಿಕ್ಕಿದರೆ ಬಿಜೆಪಿ ಈ ಬಾರಿ ಸುಲಭವಾಗಿ ಕಾಪು ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

Leave a Comment

Your email address will not be published. Required fields are marked *