Ad Widget .

ಬಂಟ್ವಾಳ: ಸ್ಕೂಟರ್‌ ಚಲಾಯಿಸಿದ ಅಪ್ರಾಪ್ತ ಬಾಲಕಿ| 26 ಸಾವಿರ ರೂ. ದಂಡ ಕಟ್ಟಿದ ತಾಯಿ

ಸಮಗ್ರ ನ್ಯೂಸ್: ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ಸ್ಕೂಟರ್‌ ಚಲಾಯಿಸಲು ನೀಡಿದ ಆಕೆಯ ತಾಯಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

Ad Widget . Ad Widget .

ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಮತ್ತು ಕಾರಿನ ಮಧ್ಯೆ ಅಪಘಾತ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು.

Ad Widget . Ad Widget .

ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ, ಅಪಘಾತದ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶಿಸಿದೆ.

Leave a Comment

Your email address will not be published. Required fields are marked *