ಸಮಗ್ರ ನ್ಯೂಸ್: ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ Polite Masters ಎಂಬ ಸೈಬರ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಸಂಸ್ಥೆಯ ಸ್ಥಾಪಕರಾಗಿ ಅನುಷ್ ಜಿ ಶೆಟ್ಟಿ, ಸಹ ಸ್ಥಾಪಕರಾಗಿ ಸುಪ್ರೀತ್, ಟಿ. ವಂಶಿ, ವೆಂಕಟರಮಣ ಭಟ್ ಹಾಗೂ ಸತ್ಯಪ್ರಕಾಶ್ ಕಾರ್ಯನಿರ್ವಹಿಸುತ್ತಿದಾರೆ.
ಈ ಸಂಸ್ಥೆಯ ಉದ್ದೇಶ ಜನರಿಗೆ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿ ಎಥಿಕಲ್ ಹ್ಯಾಕಿಂಗ್ ನ ತರಬೇತಿ ನೀಡಿ ಜನರು ಸೈಬರ್ ಕೈಂಗೆ ಬಲಿಯಾಗದಂತೆ ತಡೆಯುವುದಾಗಿದೆ.
ಇತ್ತೀಚೆಗೆ ಈ ಸಂಸ್ಥೆಯು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿಚಾರ ಗೋಷ್ಠಿ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ಲಭಿಸಿ ಯಶಸ್ಸು ಕಂಡಿದೆ.