Ad Widget .

ತೀವ್ರ ವಿರೋಧದ ಹಿನ್ನೆಲೆ| ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ನೇಮ ರದ್ದು

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ ಆಚರಣೆ ಮಾಡಲು ನಿರ್ಧರಿಸಲಾಗಿದ್ದ‌ ಕೊರಗಜ್ಜ ನೇಮಕ್ಕೆ ತುಳುನಾಡಿನ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಮೋತ್ಸವವನ್ನು ರದ್ದುಪಡಿಸಲಾಗಿದೆ.

Ad Widget . Ad Widget .

ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು ನಾಡಿನ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ ನೇಮ ಕ್ಯಾನ್ಸಲ್ ಮಾಡಲಾಗಿದೆ.

Ad Widget . Ad Widget .

ದೈವಾರಾಧನೆ ತುಳುನಾಡಿನ ಮಣ್ಣಿನಲ್ಲಿಯೇ ನಡೆಯಬೇಕು ಎಂದು ತುಳುನಾಡಿನ ಕೆಲವರು ವಾದಿಸುತ್ತಿದ್ದು, ಹೀಗಾಗಿ ಬೆಂಗಳೂರಿನಲ್ಲಿ ನೇಮೋತ್ಸವ ರದ್ದಾಗಿದೆ. ತುಳುನಾಡಿನಲ್ಲಿ ಮಾತ್ರವೇ ದೈವಾರಾಧನೆ ಮಾಡಬೇಕು ಅನ್ನೋದು ಸರಿಯೇ ತಪ್ಪೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

Leave a Comment

Your email address will not be published. Required fields are marked *