Ad Widget .

ಮಂಗಳೂರು: ಬಾಂಬ್ ಸ್ಫೋಟ ಪ್ರಕರಣ|ಶಂಕಿತನಿಗೆ ಒಬ್ಬಳು ಗರ್ಲ್​ಫ್ರೆಂಡ್

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ರೂವಾರಿ ಶಾರೀಕ್ ಗೆ ಒಬ್ಬಳು ಗರ್ಲ್​ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದ್ದು ಇದೀಗ ಅಕೆಯನ್ನು ತನಿಖಾ ದಳ ವಿಚಾರಣೆ ನಡೆಸಿರುವುದಾಗಿ ತಿಳಿದಬಂದಿದೆ.

Ad Widget . Ad Widget .

ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತ ಹೇಳಿಕೆ ನೀಡದ ಸ್ಥಿತಿಯಲ್ಲಿದ್ದಾನೆ. ಒಂದು ವಾರದ ಬಳಿಕ ಆತನಿಂದ ಹೇಳಿಕೆ ಪಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಇತ್ತ ಪೊಲೀಸರು ಮತ್ತು ಎನ್​ಐಎ ತಂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಾರೀಕ್ ಬಳಿಯಲ್ಲಿದ್ದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿರುವ ಮಾಹಿತಿಯಿಂದ ತನಿಖೆ ನಡೆಸುತ್ತಿದ್ದಾರೆ. ಶಾರೀಕ್ ಮೊಬೈಲ್​ನಲ್ಲಿದ್ದ ಕಾಂಟ್ಯಾಕ್ಟ್​ ನಂಬರ್​ಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆದರೆ ಶಾರೀಕ್ ಸಂಪರ್ಕ ಮಾಡಿದ್ದ ಬಹುತೇಕ ನಂಬರ್​ಗಳು ಸ್ವಿಚ್ಚ್​ ಆಫ್ ಆಗಿವೆ. ಕೆಲ ಸಂಖ್ಯೆಗಳ ಲೋಕೆಶನ್ ತಮಿಳುನಾಡು ಮತ್ತು ಕೇರಳ ಭಾಗಗಳಲ್ಲಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಶಾರೀಕ್ ವಾಟ್ಸಪ್ ಪರಿಶೀಲನೆ ನಡೆಸಿದಾಗ ಆತನಿಗೆ ಬೆಂಗಳೂರಿನಲ್ಲಿ ಒಬ್ಬಳು ಗರ್ಲ್​ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದೆ. ಶಾರೀಕ್ ಈ ಯುವತಿ ವಾಟ್ಸಪ್​ನಲ್ಲಿ ಸಂಪರ್ಕದಲ್ಲಿದ್ದ ಎಂಬ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶಾಪಿಂಗ್ ನೆಪದಲ್ಲಿ ಯುವತಿ ಜೊತೆ ಸುತ್ತಾಟ:
ಬೆಂಗಳೂರಿನ ಅಮೃತಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಯುವತಿ ವಾಸವಾಗಿದ್ದಾಳೆ. ಬೆಂಗಳೂರಿಗೆ ಬಂದಾಗ ಶಾರೀಕ್ ಯುವತಿ ಜೊತೆ ಸುತ್ತಾಡುತ್ತಿದ್ದನು. ಶಾಪಿಂಗ್ ಮಾಡಿಸುವ ನೆಪದಲ್ಲಿ ಯುವತಿ ಶಾರೀಕ್ ಸುತ್ತಾಡುತ್ತಿದ್ದನು.

ಯುವತಿಯ ವಿಚಾರಣೆ
ಬೆಂಗಳೂರಿಗೆ ಬಂದ ಪ್ರತಿಬಾರಿಯೂ ಶಾರೀಕ್ ಯುವತಿಯನ್ನು ಭೇಟಿಯಾಗುತ್ತಿದ್ದನು. ಈ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ತನಿಖಾ ತಂಡಗಳು ಯುವತಿಯನ್ನು ವಿಚಾರಣೆಗೆ ಒಳಪಡಿಸಿವೆ. ವಿಚಾರಣೆ ವೇಳೆ ಸ್ಪೋಟದಲ್ಲಿ ಆಕೆ ಪಾತ್ರ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಯುವತಿಯನ್ನು ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *