Ad Widget .

ಫಾಲ್ಸ್ ನಲ್ಲಿ ಜಾರಿಬಿದ್ದು ನಾಲ್ಕು ಯುವತಿಯರು ಸಾವು| ಪ್ರಾಣಕ್ಕೆ ಮುಳುವಾದ ಸೆಲ್ಫಿ ಕ್ರೇಝ್

ಸಮಗ್ರ ನ್ಯೂಸ್: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಭಾರೀ ದುರಂತ ಸಂಭವಿಸಿದೆ. ಕಾಲು ಜಾರಿ ಬಿದ್ದು ರಾಜ್ಯದ ನಾಲ್ವರು ಯುವತಿಯರು ಸಾವನ್ನಪ್ಪಿದ್ದಾರೆ. ಜಲಪಾತ ವೀಕ್ಷಿಸಲು ಬೆಳಗಾವಿಯಿಂದ 40 ಯುವತಿಯರು ತೆರಳಿದ್ದರು.

Ad Widget . Ad Widget .

ಅಲ್ಲಿ ಸೆಲ್ಪಿ ತೆಗೆದುಕೊಳ್ಳುವ ವೇಳೆ ಐವರು ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ. ಇವರಲ್ಲಿ ನಾಲ್ವರು ಮೃತಪಟ್ಟರೆ, ಓರ್ವಳ ಸ್ಥಿತಿ ಗಂಭೀರವಾಗಿದೆ. ಉಜ್ವಲ್ ನಗರದ ಆಸಿಯಾ ಮುಜಾವರ್, ಕುದ್ರಶಿಯಾ, ರುಕ್ಕಶಾರ್ ಭಿಸ್ತಿ, ತಸ್ಮಿಯಾ ಮೃತಪಟ್ಟಿದ್ದಾರೆ.

Ad Widget . Ad Widget .

ಸಾವನ್ನಪ್ಪಿದ ಎಲ್ಲ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇವರನ್ನು ನೋಡಲು ಸಂಬಂಧಿಕರು ಹಾಗೂ ಆಯಾ ಗ್ರಾಮಗಳ ಸಾರ್ವಜನಿಕರು, ಕಾಲೇಜುಗಳ ಸ್ನೇಹಿತರು ಬಿಮ್ಸ್ ಆಸ್ಪತ್ರೆ ಬಳಿ ಜಮಾವಣೆ ಆಗುತ್ತಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಚಿಕಿತ್ಸೆ ನಡೆಯುತ್ತಿದ್ದು, ಬಿಮ್ಸ್ ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಬಿಮ್ಸ್ ಆಸ್ಪತ್ರೆಯ ಬಳಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Leave a Comment

Your email address will not be published. Required fields are marked *