Ad Widget .

‘ಕಾಂತಾರ’ ಚಿತ್ರತಂಡಕ್ಕೆ ಜಯ| ‘ವರಾಹರೂಪಂ’ ಹಾಡು ಬಳಸಲು ಕೋರ್ಟ್ ಅನುಮತಿ

ಸಮಗ್ರ ನ್ಯೂಸ್: ‘ಕಾಂತಾರ’ ಸಿನಿಮಾದ ‘ವರಾಹರೂಪಂ’ ಹಾಡಿನ ವಿರುದ್ದ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ.

Ad Widget . Ad Widget .

ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ ಅಪಸ್ವರ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು. ತಾವು ಮಾಡಿದ್ದ ನವರಸಂ ರೂಪಂ ಎನ್ನುವ ಆಲ್ಬಂ ಹಾಡಿನ ರೀತಿಯಲ್ಲೇ ವರಾಹಂ ರೂಪಂ ಹಾಡನ್ನು ಮಾಡಲಾಗಿದೆ.

Ad Widget . Ad Widget .

ಅದರ ಟ್ಯೂನ್ ನಲ್ಲಿ ಬಳಸಿದ್ದ ತಾಂತ್ರಿಕ ಶೈಲಿ ತಮ್ಮ ಹಾಡನ್ನು ಹೋಲುತ್ತದೆ, ನಮ್ಮ ಹಾಡಿನ ಧಾಟಿಯಿಂದ ಪ್ರೇರಿತಗೊಂಡು ವರಾಹ ರೂಪಂ ಹಾಡು ರೂಪಿಸಲಾಗಿದೆ ಎಂದು ಕೋಜಿಕ್ಕೋಡ್ ಕೋರ್ಟಿನಲ್ಲಿ ತಕರಾರು ಅರ್ಜಿ ಹಾಕಲಾಗಿತ್ತು. ನ್ಯಾಯಾಲಯ ಈ ಬಗ್ಗೆ ಪ್ರತಿವಾದಿಗಳ ಅಹವಾಲು ಕೇಳುವ ಮೊದಲೇ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

Leave a Comment

Your email address will not be published. Required fields are marked *