ಸಮಗ್ರ ನ್ಯೂಸ್: ಇಷ್ಟು ದಿನ 9 ಮತ್ತು 10ನೇ ತರಗತಿಗಳನ್ನ ಪ್ರೌಢ ಶಾಲೆಗಳು ಎಂದು ಕರೆಯಲಾಗುತ್ತಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ 9 ಮತ್ತು 10ನೇ ತರಗತಿಗಳನ್ನ ಪ್ರಾಥಮಿಕ ಶಿಕ್ಷಣದ ” ಮುಂದುವರಿದ ಶಿಕ್ಷಣ” ಎಂದು ಕರೆಯಲಾಗುತ್ತದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪಕ ಪತ್ರವನ್ನು ಹೊರಡಿಸಿದೆ. ಈ ಜ್ಞಾಪಕ ಪತ್ರದ ಪ್ರಕಾರ 9 ಮತ್ತು 10ನೇ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ. ಪ್ರಾಥಮಿಕ ಶಿಕ್ಷಣದ ಭಾಗವಾಗಲಿವೆ.
ಶಿಕ್ಷಣ ಇಲಾಖೆ ಹೊರಡಿಸಿರು ಜ್ಞಾಪಕ ಪತ್ರದಲ್ಲಿ, ಕರ್ನಾಟಕ ಶಿಕ್ಷಣ ಸಂಸ್ಥೆಗಳ, ( ವರ್ಗಿಕರಣ, ನಿಯಂತ್ರಣ, ಪಠ್ಯಕ್ರಮ ಮತ್ತು ಇತರೆ) ನಿಯಮ 1995 ತಿದ್ದುಪಡಿ ನಿಯಮ-2022 ರಲ್ಲಿ ಈ ನಿಯಮದ ಅನ್ವಯ ನೋಂದಣಿ ಮತ್ತು ಮಾನ್ಯತೆಗೆ ಮಾತ್ರ 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರೆದ ಶಿಕ್ಷಣ ಎಂದು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದೆ.