ಸಮಗ್ರ ನ್ಯೂಸ್: ಆನೆಯ ನಿರಂತರ ದಾಳಿಯಿಂದ ಕಂಗೆಟ್ಟಿರುವ ಮಲೆನಾಡಿಗರು
ಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದಳು ಈ ಹಿನ್ನೆಲೆ ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶ ಮೆರೆದಿದ್ದಾರೆ. ಈ ವೇಳೆ ಕಳ್ಳ ಬೇಟೆ ನಿಗ್ರಹ ಶಿಬಿರದಲ್ಲಿ ಕೈಗೆ ಸಿಕ್ಕ… ಸಿಕ್ಕ… ವಸ್ತುಗಳನ್ನೆಲ್ಲಾ ಪುಡಿ ಮಾಡಿದ ಆಕ್ರೋಶಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿ ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲ ಅಲ್ಲದೆ ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು ಎಂದು ಮುಖ ತೋರಿಸಿ…ತೋರಿಸಿ ಯುವಕರು ಹೆಸರು ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.