Ad Widget .

ಯುವಕನಿಗೆ ಮದ್ಯ ಕುಡಿಸಿ ಯುವತಿಯರಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಯುವಕನೊಬ್ಬನಿಗೆ ಬಲವಂತವಾಗಿ ಮದ್ಯ ಕುಡಿಸಿ, ನಾಲ್ಕು ಮಂದಿ ಯುವತಿಯರು ಅತ್ಯಾಚಾರ ಮಾಡಿರುವ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.

Ad Widget . Ad Widget .

ರಾತ್ರಿ ಪಾಳಿಯಲ್ಲಿ ಕೆಲಸಕ್ಕಾಗಿ ಯುವಕ ತಾನು ಕಾರ್ಖಾನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ .

Ad Widget . Ad Widget .

ಯುವಕ ಹೇಳುವಂತೆ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಬಳಿ ಕಾರು ಬಂದು ನಿಂತಿತು. ಕಾರಿನೊಳಗಿದ್ದ ಯುವತಿಯೊಬ್ಬಳು ಸ್ಲಿಪ್ ತೋರಿಸಿ ಈ ವಿಳಾಸ ಎಲ್ಲಿದೆ ಎಂದು ವಿಚಾರಿದರು. ನಂತರ ಇದ್ದಕ್ಕಿದ್ದಂತೆ ಕಣ್ಣುಗಳಿಗೆ ಪೆಪ್ಪರ್ ಸ್ಪ್ರೇ ಹೊಡೆದು, ಕಾರಿನೊಳಗೆ ಎಳೆದುಕೊಂಡು ಹೋಗಿ ಕೈ-ಕಾಲುಗಳನ್ನು ಕಟ್ಟಿದರು. ಹಾಗಾಗಿ ನಾನು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಯುವತಿಯರು, ಇಂಗ್ಲಿಷ್ ಮತ್ತು ಪಂಜಾಬಿ ಭಾಷೆಯಲ್ಲಿ ಪರಸ್ಪರ ಮಾತನಾಡುತ್ತಿದ್ದರು ಮತ್ತು ಅವರು ಕುಡಿದಿದ್ದರು, ನನಗೂ ಬಲವಂತವಾಗಿ ಮದ್ಯ ಸೇವಿಸುವಂತೆ ಮಾಡಿದರು ಮತ್ತು ಕುಡಿದಾಗ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.

ಆದಾಗ್ಯೂ, ಈ ಘಟನೆಯ ನಂತರ ಪೊಲೀಸ್ ಠಾಣೆಗೆ ದೂರು ನೀಡಲು ಸಂತ್ರಸ್ತ ನಿರಾಕರಿಸಿದ್ದು,ಆತನ ಕುಟುಂಬ ಸದಸ್ಯರು ತುಂಬಾ ಭಯಭೀತರಾಗಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದು, ಪೊಲೀಸರು ಈ ವಿಷಯವನ್ನು ಗುಪ್ತಚರ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *