ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ರಿಕ್ಷಾ ಚಾಲಕನಾಗಿರುವ ಯುವಕನೋರ್ವ ನಾಪತ್ತೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಐವರ್ನಾಡು ಪೇಟೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಯತೀಶ (32) ನಾಪತ್ತೆಯಾದವರು. ಇವರು ನ.21 ರಂದು ಮನೆಯಿಂದ ತನ್ನ ಅಟೋ ರಿಕ್ಷಾದಲ್ಲಿ ಪುತ್ತೂರಿಗೆ ಬಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಇದ್ದು ಫೋನ್ ಕೂಡಾ ಸಿಗದೆ ಇದ್ದುದರಿಂದ ಈ ಬಗ್ಗೆ ಮನೆಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾದ ಯುವಕನ ಚಹರೆ:
ಹೆಸರು. ಯತೀಶ್ ಪ್ರಾಯ 32 ವರ್ಷ, ತಂದೆ, ದೇವಪ್ಪ: ಯುವಕನ, ಎತ್ತರ :5.8 ಅಡಿ, ಮೈಬಣ್ಣ : ಎಣ್ಣೆ ಕಪ್ಪು ಮೈ ಬಣ್ಣ, ದೃಢಕಾಯ ಶರೀರ ಬಾಷೆ : ಕನ್ನಡ, ತುಳು , ಧರಿಸಿರುವ ಬಟ್ಟೆ ಬರೆ : ಅರ್ಧ ತೋಳಿನ ಖಾಕಿ ಬಣ್ಣದ ಅಂಗಿ ಮತ್ತು ಆಕಾಶ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ , ಎಡಕೈಯಲ್ಲಿ ಕೆಂಪು ಬಣ್ಣದ ದಾರ ಕಟ್ಟಿರುತ್ತಾರೆ.
ಇವರನ್ನು ಯಾರಾದರೂ ಕಂಡರೆ ಬೆಳ್ಳಾರೆ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಠಾಣಾಧಿಕಾರಿಗಳು ತಿಳಿಸಿದ್ದಾರೆ.