ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಟಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕರಿಸುವ ಕೂಗು ಕೇಳಿಬಂದಿದೆ. ಆದರೆ, ಈ ಬಹಿಷ್ಕಾರದ ವಿರುದ್ಧ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಅವರು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಖಾಲಿದ್, ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದರೆ ಯಾವೊಬ್ಬ ಮುಸ್ಲಿಮರು ಕೂಡ ಅವರ ಪರವಾಗಿ ನಿಲ್ಲುವುದಿಲ್ಲ. ಆದರೆ, ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲೋದನ್ನು ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12 ಜನರು ಜೈಲಿನಿಂದ ಹೊರಗಡೆ ಬಂದಾಗ ಸ್ವಾಗತ ಮಾಡಿದ್ದಾರೆ, ರಾಜ್ಯಾತಿಥ್ಯ ನೀಡಿ,ರಾಜಕೀಯ ವ್ಯಕ್ತಿಯಾಗಿ ಬೆಳೆಸಿದ್ದಾರೆ.
ಆದರೆ, ಮುಸ್ಲಿಂ ಸಮುದಾಯದಲ್ಲಿ ಯಾರೇ ತಪ್ಪು ಮಾಡಿದರೂ ನಾವು ಅವರ ಪರವಾಗಿ ನಿಲ್ಲುವುದಿಲ್ಲ. ತಪ್ಪು ನಡೆದಾಗ ಮೌನವಾಗಿ ಇರುತ್ತೇವೆ. ಮುಸ್ಲಿಂ ವ್ಯಾಪಾರ ವಿರೋಧ ಮಾಡ್ತೀರಾ ಅಂದರೆ, ಮುಸ್ಲಿಂ ರಾಷ್ಟ್ರಗಳಿಂದ ನೀವು ಯಾವುದನ್ನು ಖರೀದಿ ಮಾಡ್ಬೇಡಿ. ಒಂದು ಸಮಾಜ ಶಾಂತಿಯಿಂದ ಇರಬೇಕು ಅಂದರೆ ಎಲ್ಲಾ ಜಾತಿಯವರು ಅನ್ಯಮಿತವಾಗಿರಬೇಕು. ಅದು ಅವಶ್ಯಕತೆ ಕೂಡ ಹಾಗೂ ಅನಿವಾರ್ಯವೂ ಕೂಡ. ಇಲ್ಲಾಂದ್ರೆ ಎಲ್ಲಾ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ ಎಂದು ಆಕ್ರೋಶ ಹೊರಹಾಕಿದರು.