Ad Widget .

ನಂದಿನಿ‌ ಹಾಲು ಹಾಗೂ ಮೊಸರಿನ ದರದಲ್ಲಿ ಹೆಚ್ಚಳ| ನಾಳೆಯಿಂದಲೇ ನೂತನ ದರ ಜಾರಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುವುದಾಗಿ ಕೆ ಎಂಎಫ್ ನಿಂದ ಘೋಷಣೆ ಮಾಡಲಾಗಿತ್ತು. ಆದರೆ ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬ್ರೇಕ್ ಹಾಕಿದ್ದರು. ಈ ಬಳಿಕ ಸಭೆ ನಡೆಸಿ ಯಾವುದೇ ತೊಂದರೆಯಾಗದಂತೆ ದರ ಹೆಚ್ಚಳಕ್ಕೆ ಸಭೆಯಲ್ಲಿ ಸಲಹೆ ಮಾಡಿದ್ದರು. ಸಿಎಂ ಸಲಹೆಯಂತೆ ಇಂದು ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ.

Ad Widget . Ad Widget .

ಈ ಕುರಿತಂತೆ ಇಂದಿನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಂದಿನ ಉತ್ಪನ್ನಗಳ ದರ ಹೆಚ್ಚಳ ಸಂಬಂಧ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಹಲವು ಅಧಿಕಾರಿಗಳು, ನಾಯಕರು ಭಾಗಿಯಾಗಿದ್ದರು.

Ad Widget . Ad Widget .

ಈ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದಂತ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಂದಿನಿ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದ ಸೌಲಭ್ಯವನ್ನು ರೈತರು ಪಡೆಯಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಕೊನೆಗೂ ಅಳೆದು ತೂಗಿ ನಂದಿನ ಹಾಲು, ಮೊಸರಿನ ದರವನ್ನು ಹೆಚ್ಚಳ ಮಾಡಲಾಗಿದೆ.

Leave a Comment

Your email address will not be published. Required fields are marked *